ಕರ್ನಾಟಕ

karnataka

ETV Bharat / state

SSLC Exam : ಬ್ರೈಲ್​ ಲಿಪಿಯಲ್ಲಿ ಪರೀಕ್ಷೆ ಬರೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬಾಗಲಕೋಟೆಯ ವಿದ್ಯಾರ್ಥಿನಿ - ಬಾಗಲಕೋಟೆ

ಬಾಗಲಕೋಟೆ ಜಿಲ್ಲೆ ಉತ್ತೂರು ಗ್ರಾಮದ ಅಂಧ ವಿದ್ಯಾರ್ಥಿನಿಯೋರ್ವಳು ಬೈಲ್​ ಲಿಪಿಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು, ಶೇ. 90 ರಷ್ಟು ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ.

Blind Student achievement
ಅಂಧ ವಿದ್ಯಾರ್ಥಿನಿ ಸಾಧನೆ

By

Published : Aug 14, 2021, 7:40 AM IST

ಬಾಗಲಕೋಟೆ :ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತಿದೆ. ಅದಕ್ಕೆ ಉದಾಹರಣೆ ಎಂಬಂತೆ ಜಿಲ್ಲೆಯ ಅಂಧ ವಿದ್ಯಾರ್ಥಿನಿಯೋರ್ವಳು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗುವ ಮೂಲಕ ಸಾಧನೆಗೈದಿದ್ದಾಳೆ.

ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಗ್ರಾಮದಲ್ಲಿ ಜ್ಯೋತಿ ಕಡಕೋಳ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ದೃಷ್ಟಿ ಸಮಸ್ಯೆ ಇದ್ದರೂ ಈಕೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಕ್ಕೆ 564 ಅಂಕ ಪಡೆದು, ಅಂಧ ವಿದ್ಯಾರ್ಥಿಗಳ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.

ಸಾಧನೆಗೈದ ವಿದ್ಯಾರ್ಥಿನಿ ಜ್ಯೋತಿ ಕಡಕೋಳ

ಓದಿ : SSLC Result: 579 ಅಂಕ, ಕನ್ನಡದಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ಪಡೆದ ಸೋಂಕಿತ ವಿದ್ಯಾರ್ಥಿ

ಉತ್ತೂರು ಗ್ರಾಮದ ಮಾರುತಿ-ಸುಮಂಗಲಾ ದಂಪತಿಯ ಪುತ್ರಿಯಾದ ಜ್ಯೋತಿ ಕಡಕೊಳ, ಹುಟ್ಟಿನಿಂದಲೂ ಕಣ್ಣಿನ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾಳೆ. ಹೊಳೆ ಆಲೂರು ಗ್ರಾಮದ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡಿದ ಈಕೆ, ಬ್ರೈಲ್ ಲಿಪಿ ಕಲಿತು ಅದರ ಮೂಲಕವೇ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆದು ಶೇ. 90.14 ರಷ್ಟು ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಜ್ಯೋತಿ ಕಡಕೋಳ ಪಡೆದ ಅಂಕ

ಮುಂದೆ ಐಎಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುವ ಕನಸು ಹೊತ್ತಿರುವ ಈಕೆ, ತನ್ನಂತೆ ದೃಷ್ಟಿ ಸಮಸ್ಯೆ ಇರುವ ಮಕ್ಕಳಿಗೆ ನೆರವಾಗಬೇಕೆಂಬ ಮಹದಾಸೆ ಹೊಂದಿದ್ದಾಳೆ.

ABOUT THE AUTHOR

...view details