ಕರ್ನಾಟಕ

karnataka

ETV Bharat / state

ಮಗನ ಹುಟ್ಟುಹಬ್ಬಕ್ಕಾಗಿ ಶಾಲೆಗೆ ಬಣ್ಣ ಬಳಿಸಿದ ಡಿ ಗ್ರೂಪ್​ ನೌಕರನಿಗೆ ಸನ್ಮಾನ - School

ಬಾಗಲಕೋಟೆಯಲ್ಲಿ ಮೊಹಮ್ಮದ್​ ಹುಸೇಮ್​ ಎಂಬವರು ತಮ್ಮ ಮಗನ ಹುಟ್ಟುಹಬ್ಬದ ದಿನದಂದು, ತಾನು ಕೆಲಸ ನಿರ್ವಹಿಸುವ ಶಾಲೆಗೆ ಸುಣ್ಣ ಬಳಿದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಶಂಸನಾ ಪತ್ರ ನೀಡಿ ಗೌರವ
ಪ್ರಶಂಸನಾ ಪತ್ರ ನೀಡಿ ಗೌರವ

By

Published : Aug 21, 2020, 5:11 PM IST

ಬಾಗಲಕೋಟೆ:ಮೊಹಮ್ಮದ್​ ಹುಸೇನ್​ ಎಂಬವರು ತನ್ನ ಮಗನ ಹುಟ್ಟುಹಬ್ಬದ ದಿನದಂದು ತಾನು ಕೆಲಸ ನಿರ್ವಹಿಸುವ ಶಾಲೆಗೆ ಸುಣ್ಣ ಬಳಿದು ಶಾಲೆಯ ಅಂದವನ್ನು ಇಮ್ಮಡಿಗೊಳಿಸಿದ್ದಾರೆ. ಇವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಜಿ.ಪಂ ಸಿಇಓ ಟಿ.ಭೂಬಾಲನ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಶಾಲೆಯಲ್ಲಿ ಡಿ ದರ್ಜೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮ್ಮದ್​ ಹುಸೇನ್​ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸನ್ಮಾನ ಮಾಡಲಾಯಿತು.

ಪ್ರಶಂಸನಾ ಪತ್ರ ನೀಡಿ ಗೌರವ

ಈ ಸಂದರ್ಭದಲ್ಲಿ ಸಿಇಓ ಮಾತನಾಡಿ, ದೇಶ ನಮಗೆ ಏನು ಮಾಡಿದೆ ಎಂಬುದಕ್ಕಿಂತ, ದೇಶಕ್ಕಾಗಿ ನಾವು ಏನಾದರೂ ಮಾಡಬೇಕು ಎಂಬ ಭಾವನೆ ಇಟ್ಟುಕೊಳ್ಳಬೇಕು. ಆಗ ಇಂತಹ ಸಮಾಜಮುಖಿ ಕಾರ್ಯ ಮಾಡಲು ಸಾಧ್ಯ ಎಂದರು.

ಈ ವೇಳೆ, ಹುಟ್ಟುಹಬ್ಬದ ಉಡುಗೊರೆಯಾಗಿ ಶಾಲಾ ಬ್ಯಾಗ್ ಮತ್ತು ಸಮವಸ್ತ್ರಗಳನ್ನು ಬಾಲಕನಿಗೆ ನೀಡಿದರು. ಹುನಗುಂದ ತಹಶೀಲ್ದಾರ ಬಸವರಾಜ ನಾಗರಾಳ ಸೇರಿದಂತೆ‌ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details