ಕರ್ನಾಟಕ

karnataka

ETV Bharat / state

ತುಂತುರು ಮಳೆಗೆ ಕುಸಿದ ಮನೆ: ಒಂದೇ ಕುಟುಂಬದ ಮೂವರ ದಾರುಣ ಸಾವು - bagalakote district news

ತುಂತುರು ಮಳೆಗೆ ಮಣ್ಣಿನ ಮನೆ ಕುಸಿದು ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದ ಐವರು ಸದಸ್ಯರು ಮನೆಯಲ್ಲಿ ಮಲಗಿದ್ದಾಗ ತಡರಾತ್ರಿ ಎರಡು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ತುಂತುರು ಮಳೆಗೆ ಕುಸಿದ ಮನೆ

By

Published : Oct 6, 2019, 11:12 AM IST

Updated : Oct 6, 2019, 11:21 AM IST

ಬಾಗಲಕೋಟೆ : ನಿರಂತರ ಮಳೆಯಿಂದಾಗಿ ತಡರಾತ್ರಿ ಮನೆಯ ಮಾಳಿಗೆ ಕುಸಿದು ಬಿದ್ದು ಮೂವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರವ ತುಂತುರು ಮಳೆಗೆ ಮಣ್ಣಿನ ಮನೆ ಕುಸಿದು ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದ ಐವರು ಸದಸ್ಯರು ಮನೆಯಲ್ಲಿ ಮಲಗಿದ್ದಾಗ ತಡರಾತ್ರಿ ಎರಡು ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಐವರ ಪೈಕಿ ಮೂವರು ಸಾವನ್ನಪ್ಪಿದ್ದು ಮೃತಪಟ್ಟವರನ್ನು ಈರಪ್ಪ ಹಡಪದ (60), ಗೌರವ್ವ(53), ನಿಂಗಪ್ಪ(32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅದೃಷ್ಠವಶಾತ್ ನಿಂಗಪ್ಪನ‌ ಪತ್ನಿ ಸವಿತಾ ಹಾಗೂ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊಲೀಸರು ಹಾಗೂ ಸ್ಥಳೀಯರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಸತತ ಆರು ಗಂಟೆಗಳ ಕಾರ್ಯಾಚರಣೆ ನಡೆಸಿ ಮನೆಯ ಅವಶೇಷಗಳ ಅಡಿ ಸಿಲುಕಿದ್ದ ಮೂವರ ಶವಗಳನ್ನ ಹೊರತೆಗೆದಿದ್ದಾರೆ.

ಇನ್ನು ಘಟನೆ ತಿಳಿದ ತಕ್ಷಣ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಾಯಕ್ಕ ಮೇಟಿ ಹಾಗೂ ಎಸ್ಪಿ ಲೋಕೇಶ್ ಜಗಲಾಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇತ್ತ ಕಿರಸೂರು ಗ್ರಾಮದಲ್ಲಿ ಹೆಚ್ಚಿನದಾಗಿ ಮಣ್ಣಿನ ಮನೆಗಳೆ ಇರುವುದರಿಂದ ತುಂತುರು ಮಳೆಗೆ ಮಣ್ಣಿನ ಮನೆಗಳು ಬೀಳುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.

ಸಾವನ್ನಪ್ಪಿರುವ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷದಂತೆ ಒಟ್ಟು ಹದಿನೈದು ಲಕ್ಷ ರೂ. ಪರಿಹಾರ ದೊರಕಿಸುವುದಾಗಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ. ಸದ್ಯ ಮೂವರ ಅಂತಿಮ ಸಂಸ್ಕಾರಕ್ಕೆ 15 ಸಾವಿರ ರೂಪಾಯಿ ನೀಡಲಾಗುವುದು. ಇನ್ನು ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿರುವ ತಾಯಿ-ಮಗುವಿನ ತಾತ್ಕಾಲಿಕ ಆಶ್ರಯ ಒದಗಿಸಲಾಗುವುದು. ಜೊತೆಗೆ ಅವರ ಜೀವನ ನೀರ್ವಹಣೆಗೆ ದವಸ ಧಾನ್ಯದ ವ್ಯವಸ್ಥೆಗೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗುವುದು ಎಂದರು.

Last Updated : Oct 6, 2019, 11:21 AM IST

ABOUT THE AUTHOR

...view details