ಕರ್ನಾಟಕ

karnataka

ETV Bharat / state

ಮರಣ ಪತ್ರ​ ಬರೆದಿಟ್ಟು ಸಾವಿಗೆ ಶರಣಾದ ಬ್ಯಾಂಕ್​ ಮ್ಯಾನೇಜರ್​ - ಬಾಗಲಕೋಟೆ ಬ್ಯಾಂಕ್​ ಮ್ಯಾನೇಜರ್​ ಸಾವು

ಡೆತ್​ ನೋಟ್​ ಬರೆದಿಟ್ಟು ಬಾಗಲಕೋಟೆ ನಗರದಲ್ಲಿ ಕೆವಿಜಿ ಬ್ಯಾಂಕ್​ ಗ್ರೇಡ್​​-2 ಮ್ಯಾನೇಜರ್​​ ನೇಣಿಗೆ ಶರಣಾದ ಘಟನೆ ನಡೆದಿದೆ.

bagalakote-kvg-bank-manager-suicide
ಬ್ಯಾಂಕ್​ ಮ್ಯಾನೇಜರ್​

By

Published : May 2, 2020, 12:04 PM IST

ಬಾಗಲಕೋಟೆ : ಮೇಲಧಿಕಾರಿಗಳ ಕಿರುಕುಳ, ಬಡ್ಡಿ ದಂದೆಕೋರರ ಬ್ಲಾಕ್‌ಮೇಲ್​ಗೆ ಮನನೊಂದು ಕೆವಿಜಿ ಬ್ಯಾಂಕ್ ಗ್ರೇಡ್ 2 ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನವನಗರದ ಸೆಕ್ಟರ್ ನಂ. 26ರಲ್ಲಿ ನಡೆದಿದೆ.

ರಾಣೆಬೆನ್ನೂರು ನಿವಾಸಿ ರಾಘವೇಂದ್ರ ಕುಲಕರ್ಣಿ (58) ಆತ್ಮಹತ್ಯೆ ಮಾಡಿಕೊಂಡವರು. ಈ ಸುದ್ದಿ ತಿಳಿದು ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈಗಾಗಲೇ 6 ಜನರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಡೆತ್​ ನೋಟ್​ ಬರೆದಿಟ್ಟಿರುವ ರಾಘವೇಂದ್ರ, ಕೆವಿಜಿ ಬ್ಯಾಂಕ್‌ ವಿಜಲನ್ಸ್ ಆಫಿಸರ್ ಧಾರವಾಡದ ವಿನಯ್ ಐರಸಂಗ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಿರೇಕೆರೂರು ಮೂಲದ ಬಡ್ಡಿದಂಧೆಕೋರರ ಹೆಸರುಗಳನ್ನು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ರಾಣೆಬೆನ್ನೂರಿನ ರೈತಸಂಘದ ಮುಖಂಡ ಸಂಗನಗೌಡ ಮಲ್ಲನಗೌಡ್ರ, ಮಹೇಶ್ ಬಿಸಲಳ್ಳಿ, ವೀರಯ್ಯ ಹೇಡಿಗುಂದಿಮಠ, ನಾಗರಾಜ ಗುರುಲಿಂಗಪ್ಪಗೌಡ ಹಾಗೂ ಹಿರೇಕೆರೂರು ಮೂಲದ ಹನುಮಗೌಡ ಹುಡೇದ ಇವರಿಂದ 3% ರಂತೆ ಸಾಲ ಪಡೆದಿದ್ದೆ. ಸಾಲ ತೀರಿಸಿದರೂ ಖಾಲಿ ಚೆಕ್, ಬಾಂಡ್ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details