ಬಾಗಲಕೋಟೆ: ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದ ಕ್ರಮ ಖಂಡಿಸಿ ತಹಶೀಲ್ದಾರ್ ಕಚೇರಿಗೆ ಬರುವ ಅಧಿಕಾರಿಗಳ ಬೂಟ್ ಪಾಲಿಶ್ ಮಾಡುವ ಮೂಲಕ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ರಮೇಶ್ ಬದನ್ನೂರು ನೇತೃತ್ವದಲ್ಲಿ ಕರವೇ 'ಬೂಟ್ ಪಾಲಿಶ್ ಚಳುವಳಿ' (Boot Polishing Movement) ಹಮ್ಮಿಕೊಂಡಿತ್ತು. ತಹಶೀಲ್ದಾರ್ ಸೇರಿದಂತೆ ಕಚೇರಿಗೆ ಬರುವ ಅಧಿಕಾರಿಗಳನ್ನು ತಡೆದು ಕಾಲಿಗೆ ಬಿದ್ದು ಬೂಟ್ ಪಾಲಿಶ್ ಮಾಡುವ ಮೂಲಕ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ನೀಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.