ಬಾಗಲಕೋಟೆ : ನಗರದಲ್ಲಿ ಹೋಳಿ ಆಚರಣೆ ಹಿನ್ನೆಲೆ ಮದ್ಯ ಮಾರಾಟವನ್ನು ನಿಷೇಧ ಮಾಡಿದ್ದರೂ, ಹೇಗೋ ಮದ್ಯ ಪಡೆದುಕೊಂಡಿರುವ ಒಂದು ಗುಂಪು ನಿರ್ಭಯವಾಗಿ ರಸ್ತೆ ಮೇಲೆ ಕುಳಿತು ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೋಳಿ ಹಬ್ಬಕ್ಕೆ ಬಾರ್ ಬಂದ್ ಆಗಿದ್ರೂ ಎಣ್ಣೆಗೆ ಮಾತ್ರ ಬರವಿಲ್ಲ... ವಿಡಿಯೋ ನೋಡಿ - ಬಾಗಲಕೋಟೆ ಹೋಳಿ ಆಚರಣೆ
ಜಿಲ್ಲೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಮದ್ಯ ಮಾರಾಟ ಅಂಗಡಿಗಳು ಬಂದ್ ಆಗಿರುವ ಹಿನ್ನೆಲೆ ಈಗ ನಿರ್ಭಯವಾಗಿಯೇ ರಸ್ತೆಯ ಮೇಲೆ ಕುಳಿತುಕೊಂಡು ಮದ್ಯ ಸೇವನೆ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಗಲಕೋಟೆ ರಸ್ತೆ ಮೇಲೆ ಮದ್ಯ ಸೇವನೆ
ಬಾರ್ ರೆಸ್ಟೋರೆಂಟ್ ಸೇರಿದಂತೆ ಎಂಆರ್ಪಿ ದರ ಮಾರಾಟ ಮಳಿಗೆಗಳನ್ನು ಸಹ ಬಂದ್ ಮಾಡಿ ಜಿಲ್ಲಾಡಳಿತ ಅದೇಶಿಸಿದೆ. ಆದರೆ ಮದ್ಯ ಮಾರಾಟ ಅಂಗಡಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಬಾರ್ ಇಲ್ಲದಿದ್ದರೂ ಮದ್ಯವನ್ನು ಎಲ್ಲಿಂದಲೋ ತಂದೂ, ನಿರ್ಭಯವಾಗಿಯೇ ರಸ್ತೆಯ ಮೇಲೆ ಕುಳಿತುಕೊಂಡು ಸೇವನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲಾಡಳಿತ ಶಾಂತಿ ಸುವ್ಯವಸ್ಥೆಗೆಂದು ಮದ್ಯ ಮಾರಾಟ ಬಂದ್ ಮಾಡಿದರೆ, ಇತ್ತ ಕುಡುಕರು ಮಾತ್ರ ಮೊದಲೇ ಮದ್ಯದ ವ್ಯವಸ್ಥೆ ಮಾಡಿಕೊಂಡಿದ್ದು ನಿರ್ಭಯವಾಗಿ ರಸ್ತೆ ಮೇಲೆ ಕುಡಿಯುತ್ತಾ ತೂರಾಡುತ್ತಿದ್ದಾರೆ.