ಕರ್ನಾಟಕ

karnataka

ETV Bharat / state

ಮಾರ್ಚ್ ಅಂತ್ಯದೊಳಗೆ ಎಲ್ಲಾ ಕಾಮಗಾಗಿ ಪೂರ್ಣಗೊಳಿಸಿ : ಅಧಿಕಾರಿಗಳಿಗೆ ಡಿಸಿಎಂ ಸೂಚನೆ - ಬಾಗಲಕೋಟೆ ಗೋವಿಂದ ಕಾರಜೋಳ ನಗರಸಭೆ ಅಧಿಕಾರಿಗಳ ಸಭೆ ಸುದ್ದಿ

ಮುಧೋಳ ನಗರಸಭೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿ ಡಿಸಿಎಂ ಗೋವಿಂದ ಕಾರಜೋಳ ಅವರು, ನಗರ ಅಭಿವೃದ್ಧಿಗೆ ರೂಪಿಸಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ‌ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿದ್ದು, ಕೇಂದ್ರ ಪುರಸ್ಕೃತ ‌ಯೋಜನೆಗಳಿಗೆ ಅನುದಾನವನ್ನು ನೀಡುತ್ತಿದೆ. ಈ ಯೋಜನೆಗಳನ್ನು ಯಶಸ್ವಿಗಾಗಿ ಅನುಷ್ಠಾನ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

bagalakote-govinda-karjola-meeting-with-municipality-officers
ಮಾರ್ಜ್​ ಅಂತ್ಯದೊಳಗೆ ಎಲ್ಲಾ ಕಾಮಗಾಗಿ ಪೂರ್ಣಗೊಳಿಸಿ

By

Published : Jan 14, 2020, 8:41 PM IST

Updated : Jan 14, 2020, 9:10 PM IST

ಬಾಗಲಕೋಟೆ:ಮುಧೋಳ ನಗರದಲ್ಲಿ ಮಾರ್ಚ್ ಅಂತ್ಯದೊಳಗೆ ಯಾವುದೇ ಅನುದಾನ ಲ್ಯಾಪ್ಸ್ ಆಗದಂತೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ‌ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಮುಧೋಳ ನಗರಸಭೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ನಗರ ಅಭಿವೃದ್ಧಿಗೆ ರೂಪಿಸಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ‌ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿದ್ದು, ಕೇಂದ್ರ ಪುರಸ್ಕೃತ ‌ಯೋಜನೆಗಳಿಗೆ ಅನುದಾನವನ್ನು ನೀಡುತ್ತಿದೆ. ಈ ಯೋಜನೆಗಳನ್ನು ಯಶಸ್ವಿಗಾಗಿ ಅನುಷ್ಠಾನ ಗೊಳಿಸಬೇಕು. ವಸತಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ವಸತಿಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು.

ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ, ಒಳಚರಂಡಿ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಗೊಳಿಸಿ ಉತ್ತಮವಾಗಿ ನಿರ್ವಹಣೆ ಮಾಡಬೇಕು. ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಬೇಕು. ಒಂದೇ ಸ್ಥಳದಲ್ಲಿ ಒಂದೇ ಕಾಮಗಾರಿಯನ್ನು ಬೇರೆ ಬೇರೆ ಇಲಾಖೆಗಳು ಅನುಷ್ಠಾನ ಗೊಳಿಸಿ ಓವರ್ ಲ್ಯಾಪ್ಸ್ ಆಗದಂತೆ ಕ್ರಮಕೈಗೊಳ್ಳಬೇಕು. ಈಗಾಗಲೇ ಶಂಕುಸ್ಥಾಪನೆಗೊಂಡ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ‌ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಇದಕ್ಕು ಮುಂಚೆ ಮುಧೋಳ ವಿಧಾನ ಸಭಾ ಕ್ಷೇತ್ರದ 12 ಗ್ರಾಮಗಳಲ್ಲಿ 7.6 ಕೋಟಿ ರೂ ವೆಚ್ಚದ ವಿವಿಧ 17 ಅಭಿವೃದ್ಧಿ ಕಾಮಗಾರಿಗಳಿಗೆ ಡಿಸಿಎಂ ಚಾಲನೆ ನೀಡಿ, ಸಾರ್ವಜನಿಕ ಅಹವಾಲುಗಳನ್ನು‌ ಸ್ವೀಕರಿಸಿ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಅಹವಾಲುಗಳನ್ನು‌ ಇತ್ಯರ್ಥಪಡಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.

Last Updated : Jan 14, 2020, 9:10 PM IST

ABOUT THE AUTHOR

...view details