ETV Bharat Karnataka

ಕರ್ನಾಟಕ

karnataka

ETV Bharat / state

ಆಸ್ಪತ್ರೆ ಅವ್ಯವಸ್ಥೆ ವಿಡಿಯೊ ಕರೆ ಮೂಲಕ ಬಹಿರಂಗ: ಪತಿ ಪ್ರಾಣ ಉಳಿಸುವಂತೆ ಪತ್ನಿ ಅಳಲು - covid-19 hospital problem

ಆಸ್ಪತ್ರೆಗೆ ದಾಖಲಾಗಿ ಐದು ದಿನ ಕಳೆದರೂ ಬಾಗಲಕೋಟೆ ಜಿಲ್ಲಾ ಕೋವಿಡ್​​ ಆಸ್ಪತ್ರೆ ಸಿಬ್ಬಂದಿ ಪರೀಕ್ಷಾ ವರದಿ ನೀಡಿಲ್ಲ. ಅಲ್ಲದೆ ಸೋಂಕು ಶಂಕಿತ ವ್ಯಕ್ತಿಗೆ ಉಸಿರಾಟ ತೊಂದರೆ ಇದ್ದರೂ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

bagalakote-covid-hospital-problem
ಬಾಗಲಕೋಟೆ ಆಸ್ಪತ್ರೆ ಅವ್ಯವಸ್ಥೆ
author img

By

Published : Aug 1, 2020, 7:27 PM IST

ಬಾಗಲಕೋಟೆ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವ ವಿಚಾರವನ್ನು ಕೊರೊನಾ ಶಂಕಿತ ವ್ಯಕ್ತಿಯೊಬ್ಬರು ತನ್ನ ಹೆಂಡತಿಗೆ ವಿಡಿಯೊ ಕರೆ ಮೂಲಕ ತಿಳಿಸಿದ್ದಾರೆ.

ಕೊರೊನಾ ಶಂಕಿತ ಮುಧೋಳ ಕೆಎಸ್​​ಆರ್​ಟಿಸಿ ಡಿಪೋ ಕಂಡಕ್ಟರ್​​ ಜಿಲ್ಲಾ ಕೋವಿಡ್​​ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು,​ ತಮ್ಮ ಪತ್ನಿ ಶಾಂತಾಬಾಯಿಗೆ ಕರೆ ಮಾಡುವ ಮೂಲಕ ಆಸ್ಪತ್ರೆಯ ಅವ್ಯವಸ್ಥೆಯನ್ನು ತೋರಿಸಿದ್ದಾರೆ. ಅಲ್ಲದೆ ತೀವ್ರ ಉಸಿರಾಟ ತೊಂದರೆಯಿಂದ ಮಾತನಾಡಲಾಗದೆ ಕಣ್ಣೀರಿಡುತ್ತಿರುವ ದೃಶ್ಯವನ್ನು ಕಂಡು ಪತ್ನಿ ಭಯಭೀತರಾಗಿದ್ದಾರೆ.

ಬಾಗಲಕೋಟೆ ಆಸ್ಪತ್ರೆ ಅವ್ಯವಸ್ಥೆ ವಿಡಿಯೊ ಕರೆ ಮೂಲಕ ಬಹಿರಂಗ

ಅಲ್ಲದೆ ಆಸ್ಪತ್ರೆಗೆ ದಾಖಲಾಗಿ ಐದು ದಿನಗಳಾದರೂ, ಇನ್ನೂ ಕೊರೊನಾ ವರದಿ ಬಂದಿಲ್ಲ ಎಂಬುದೇ ಆಶ್ಚರ್ಯ ಮೂಡಿಸಿದೆ. ಉಸಿರಾಟ ತೊಂದರೆ ಇದ್ರೂ ವೆಂಟಿಲೇಟರ್​​, ಆಕ್ಸಿಜನ್​ ನೀಡದಿರುವುದು ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ ತಮ್ಮ ಪತಿಯ ಪ್ರಾಣ ಉಳಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details