ಬಾಗಲಕೋಟೆ: ಬರುವ ಜನವರಿ 15 ರಿಂದ 30ರ ವರೆಗೆ ಸುಪ್ರಸಿದ್ಧ ಬಾದಾಮಿ-ಬನಶಂಕರಿದೇವಿ ದರ್ಶನವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಬಾದಾಮಿ ತಾ.ಪಂ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆಯ ಭೀತಿ ನಿಮಿತ್ತ ಜನರ ಹಿತದೃಷ್ಟಿಯಿಂದ ಜನವರಿ 15 ರಿಂದ 30ರ ವರೆಗೆ ಸಾರ್ವಜನಿಕರು ಬನಶಂಕರಿದೇವಿ ದರ್ಶನ ಪಡೆಯುವುದನ್ನು ನಿಷೇಧಿಸಲಾಗಿದೆ. ಅರ್ಚಕರು ಗುಡಿಯೊಳಗೆ ಪೂಜೆ ಮಾಡಬಹುದು. ಇದಕ್ಕೆ ಟ್ರಸ್ಟ್ ಕಮಿಟಿಯವರು ಒಪ್ಪಿಕೊಂಡಿದ್ದಾರೆ ಎಂದರು.