ಕರ್ನಾಟಕ

karnataka

ETV Bharat / state

ಆಯುಷ್ಮಾನ್ ಭಾರತ ಕಾರ್ಯಕ್ರಮ: ಡಿಸಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕ್ಲಾಸ್​

ಜನರಲ್ಲಿ ಆರೋಗ್ಯದ ಕುರಿತು ಹೇಗೆ ಜಾಗೃತಿ ಮೂಡಿಸಬೇಕೆಂದು, ಆಶಾ ಕಾರ್ಯಕರ್ತರು, ಆಯಾಗಳು ಹಾಗೂ ನರ್ಸ್​ಗಳಿಗೆ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಲಾಸ್​ ತೆಗೆದುಕೊಂಡರು.

By

Published : Sep 15, 2019, 5:06 PM IST

ಲೆಕ್ಚರ್​​

ಬಾಗಲಕೋಟೆ:ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು, ಆಯಾಗಳು ಹಾಗೂ ನರ್ಸ್​ಗಳಿಗೆ ಅಧ್ಯಯನ ಮಾಡಲು ಬಂದವರಿಗೆ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಪಾಠ ಮಾಡುವ ಮೂಲಕ ಗಮನ ಸೆಳೆದರು.

ಆಯುಷ್ಮಾನ್ ಭಾರತ ಕುರಿತು ಜಾಗೃತಿ ಜಾಥ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಡಿಸಿಎಂ ಗೋವಿಂದ ಕಾರಜೋಳ ಚಾಲನೆ ನೀಡಬೇಕಾಗಿತ್ತು. ಆದರೆ, ಸಚಿವರು ಬರುವುದು ತಡವಾಗಿದ್ದರಿಂದ ಜಿಲ್ಲಾಧಿಕಾರಿ ಲೆಕ್ಚರ್ ಕೊಡಲು ಮುಂದಾದ್ರು. ಮೊದಲು ಆಶಾ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿ, ಶೌಚಾಲಯ ಹಾಗೂ ಸ್ವಚ್ಛತೆ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಬಯಲು ಶೌಚ ಮುಕ್ತ ಮಾಡಲು ಸಾಧ್ಯವಾಗಿಲ್ಲ. ಆಶಾ ಕಾರ್ಯಕರ್ತೆಯರು ಈ ಬಗ್ಗೆ ಹೆಚ್ಚು ಶ್ರಮ ವಹಿಸಬೇಕು ಎಂದು ಕರೆ ನೀಡಿದ್ರು.

ಜಿಲ್ಲಾಧಿಕಾರಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲೆಕ್ಚರ್​​

ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘದ ನರ್ಸ್​ಗಳು ಮಹಾವಿದ್ಯಾಲಯದ ವಿದ್ಯಾರ್ಥಿನಿಗಳೊಂದಿಗೆ ಚರ್ಚೆ ನಡೆಸುತ್ತಾ, ಕೆಲ ಆರೋಗ್ಯ ವಿಚಾರವಾಗಿ ಪಾಠ ಮಾಡಿದ್ರು. ಪ್ರಾಧ್ಯಾಪಕರಾಗಿ ಪ್ರಶ್ನೆ ಕೇಳುವ ಜೊತೆಗೆ ಉತ್ತರ ನೀಡಿ, ನೀವು ಭವ್ಯ ಭಾರತಕ್ಕೆ ಸಾಕಷ್ಟು ಶ್ರಮ ವಹಿಸಬೇಕು ಎಂದು ತಿಳಿಸಿದ್ರು.

ABOUT THE AUTHOR

...view details