ಬಾಗಲಕೋಟೆ:ಶ್ರಾವಣ ಮಾಸದಲ್ಲಿ ಪೂಜೆ ಪುನಸ್ಕಾರ, ಹಬ್ಬ ಹರಿದಿನ ಸಾಲು ಸಾಲಾಗಿ ಬರುತ್ತವೆ. ಆದರೆ, ಈ ಬಾರಿ ಕೊರೊನಾ ವೈರಸ್ ಹಿನ್ನೆಲೆ, ಹಬ್ಬಗಳನ್ನು ಸರಳವಾಗಿ ಹಾಗೂ ಮನೆಯಲ್ಲಿ ಆಚರಣೆ ಮಾಡುವಂತೆ ಯುವಕರ ಸಂಘಟನೆಯೊಂದು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ.
ಹಬ್ಬಗಳನ್ನು ಸರಳವಾಗಿ ಮನೆಯಲ್ಲೇ ಆಚರಣೆ ಮಾಡುವಂತೆ ಜಾಗೃತಿ - corona awareness
ಈ ಬಾರಿ ಹಬ್ಬಗಳನ್ನು ಸರಳವಾಗಿ ಹಾಗೂ ಮನೆಯಲ್ಲಿಯೇ ಆಚರಣೆ ಮಾಡುವಂತೆ ಯುವಕರ ಸಂಘಟನೆಯೊಂದು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ.
![ಹಬ್ಬಗಳನ್ನು ಸರಳವಾಗಿ ಮನೆಯಲ್ಲೇ ಆಚರಣೆ ಮಾಡುವಂತೆ ಜಾಗೃತಿ corona wareness](https://etvbharatimages.akamaized.net/etvbharat/prod-images/768-512-8185307-1107-8185307-1595819024776.jpg)
ಕೊರೊನಾ ಮಾಹಾಮಾರಿ ವಿರುದ್ದ ವಿದ್ಯಾಗಿರಿ ವಲಯ ಗೆಳೆಯರ ಬಳಗದಿಂದ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ವಿದ್ಯಾಗಿರಿಯ 23 ರಸ್ತೆಗಳು, ಜ್ಯೋತಿ ಕಾಲೋನಿ, ತೆಗ್ಗಿ ಲೇಔಟ್, ರೂಪಲ್ಯಾಂಡ್, ಪೋಸ್ಟಲ್ ಕಾಲೋನಿ, ಸುಳಿಭಾವಿ ಕಾಲೋನಿ, ಮನಗೂಳಿ ಲೇಔಟ್, ಅಕ್ಕಿಮರಡಿ ಲೇಔಟ್ಗಳಲ್ಲಿ ಮೈಕ್ನಲ್ಲಿ ಹೇಳುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ.
ಗೆಳೆಯರ ಬಳಗದ ಸದಸ್ಯರಾದ ಶಿವಕುಮಾರ್ ಮೇಲ್ನಾಡ, ಉಮೇಶ್ ಹಂಚಿನಾಳ, ದ್ಯಾಮಣ್ಣ ಜಲಗೇರಿ, ಬಸವರಾಜ ಯಂಕಂಚಿ, ಮಲ್ಲು ಮುತ್ತಪ್ಪನವರ, ಪ್ರಶಾಂತ ರಾಜೂರ ರವಿ ಗಾಣಿಗೇರ ಮುಂತಾದವರು ಭಾಗವಹಿಸಿದ್ದು ಕೊರೊನಾ ಮಾಹಾಮಾರಿ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕೂಡಾ ಹೇಳಲಾಗುತ್ತಿದೆ.