ಕರ್ನಾಟಕ

karnataka

ETV Bharat / state

ಚಿಂತಾಮಣಿಯ ಮುರಗಮಲ್ಲಾ ದರ್ಗಾ ಆವರಣದಲ್ಲಿ ಜಾಗೃತಿ ಸಭೆ - undefined

ಯಾತ್ರಾ ಸ್ಥಳವಾದ ಮುರಗಮಲ್ಲಾ ದರ್ಗಾ ಸುತ್ತಮುತ್ತ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಕೋಮು- ಸೌಹಾರ್ಧತೆ ಕಾಪಾಡಿಕೊಳ್ಳಿ ಎಂದು ದರ್ಗಾದಲ್ಲಿ ಜಾಗೃತಿ ಸಭೆ ನಡೆಸಲಾಯಿತು. ಕೆಂಚಾರ್ಲಹಳ್ಳಿ ಠಾಣೆಯ ಸರ್ಕಲ್ ಇನ್ಸ್​ಪೆಕ್ಟರ್ ನಯಾಜ್ ಬೇಗ್ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿದರು.

ದರ್ಗಾ ಆವರಣದಲ್ಲಿ ಜಾಗೃತಿ ಸಭೆ

By

Published : Apr 28, 2019, 8:39 PM IST

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮುರಗಮಲ್ಲಾ ಗ್ರಾಮದ ದರ್ಗಾ ಆವರಣದಲ್ಲಿ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಜಾಗೃತಿ ಸಭೆ ನಡೆಸಿದರು.

ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್​ಪೆಕ್ಟರ್ ನಯಾಜ್ ಬೇಗ್ ಅವರು ಗ್ರಾಮಸ್ಥರೊಡನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ಈ ವೇಳೆ ದರ್ಗಾ ಗ್ರಾಮದಲ್ಲಿ ಸಂಶಯಾಸ್ಪದವಾಗಿ ಬಿಡಾರ ಹೂಡಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಕೋರಿದರು. ಅಲ್ಲದೆ ಯಾತ್ರಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೋಮು- ಸೌಹಾರ್ಧತೆಯನ್ನು ಕಾಪಾಡಿಕೊಂಡಿರಲು ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ದರ್ಗಾ ಆವರಣದಲ್ಲಿ ಜಾಗೃತಿ ಸಭೆ

ಅಲ್ಲದೆ, ಯಾವುದೇ ಧರ್ಮಗ್ರಂಥದಲ್ಲಿ ಹಿಂಸೆ ಮೂಲಕ ಧರ್ಮ ಪ್ರಚಾರ ಅಥವಾ ರಕ್ಷಣೆ ಕುರಿತು ಹೇಳಿಲ್ಲ ಎಂಬುದನ್ನು ಇನ್ಸ್​​ಪೆಕ್ಟರ್​ ನಯಾಜ್​ ಮನವರಿಕೆ ಮಾಡಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್​ ಸದಸ್ಯರಾದ ಅನ್ಸರ್ ಖಾನ್, ಆರಿಫ್ ಖಾನ್, ತನ್ವೀರ್ ಪಾಷಾ, ಅಮಾನುಲ್ಲಾ, ಲಕ್ಷ್ಮಿನಾರಾಯಣ ರೆಡ್ಡಿ, ಸಮೀವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details