ಬಾಗಲಕೋಟೆ: ವಾಹನಕ್ಕೆ ದಾರಿ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬಾದಾಮಿ ತಹಶೀಲ್ದಾರ್ ಮೇಲೆಯೇ ಇಬ್ಬರು ವ್ಯಕ್ತಿಗಳು ಹಲ್ಲೆಗೈದ ಘಟನೆ ಜಿಲ್ಲೆಯ ನೀರಬೂದಿಹಾಳ ಗ್ರಾಮದ ಸಮೀಪ ನಡೆದಿದೆ.
ದಾರಿ ಬಿಡಿ ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ಹಲ್ಲೆ, ಇಬ್ಬರ ಬಂಧನ - ಜಾನಮಟ್ಟಿ, ಶಿವಾನಂದ ಜಾನಮಟ್ಟಿ
ಬಾದಾಮಿ ತಹಶೀಲ್ದಾರ್ ಸುಹಾಸ್ ಇಂಗಳೆ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ದಾರಿ ಬಿಡಿ ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ಹಲ್ಲೆ
ಬಾದಾಮಿ ತಹಶೀಲ್ದಾರ್ ಸುಹಾಸ್ ಇಂಗಳೆ ಮೇಲೆ ನೀರ ಬೂದಿಹಾಳ ಗ್ರಾಮದ ನಾಗಪ್ಪ ಜಾನಮಟ್ಟಿ, ಶಿವಾನಂದ ಜಾನಮಟ್ಟಿ ಎಂಬುವರಿಂದ ಹಲ್ಲೆ ನಡೆದಿದೆ. ಘಟನೆ ಬಳಿಕ ಈ ಇಬ್ಬರ ವಿರುದ್ಧ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ರಸ್ತೆ ಮಧ್ಯೆ ಪರಸ್ಪರ ಗಲಾಟೆ ಮಾಡುತ್ತಿದ್ದ ನಾಗಪ್ಪ, ಶಿವಾನಂದ ಎಂಬುವರಿಗೆ ತಹಶೀಲ್ದಾರ್ ವಾಹನಕ್ಕೆ ದಾರಿ ಬಿಡಿ ಎಂದು ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ.ಹಲ್ಲೆಯಿಂದ ಗಾಯಗೊಂಡಿದ್ದ ತಹಶೀಲ್ದಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.