ಬಾಗಲಕೋಟೆ:ಜಿಲ್ಲೆಯಕೆರೂರು ಪಟ್ಟಣದಲ್ಲಿನ ಗಲಾಟೆ ಪ್ರಕರಣವು ಬೂದಿ ಮುಚ್ಚಿದ ಕೆಂಡದಂತಾಗಿದೆ. ಕಳೆದ ಎರಡು ದಿನಗಳಿಂದ ನಡೆದ ಗಲಾಟೆಯಿಂದಾಗಿ ಇಂದು ಮತ್ತೆ ಮರುಕಳಿಸಿದೆ. ಕುಳಗೇರಿ ಕ್ರಾಸ್ ಬಳಿರುವ ಡಾಬಾವೊಂದರಲ್ಲಿ ಕೆಲ ಕಿಡಿ ಗೇಡಿಗಳು ದಾಳಿ ಮಾಡಿ, ಮೂವರ ಮೇಲೆ ಹಲ್ಲೆ ನಡೆಸಿದ ಘಟನೆ ಜರುಗಿದೆ.
ಕೆರೂರು ಮೂಲದ ಮಳಗಲಿ ಡಾಬಾಕ್ಕೆ ಆಗಮಿಸಿದ ಕೆಲವರು ಹಲ್ಲೆ ನಡೆಸಿದ ಪರಿಣಾಮ ರಾಜೇಸಾಬ್, ಹನೀಫ್ ಮತ್ತು ಮಲೀಕ್ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಬೆನ್ನಲ್ಲೆ ಸ್ಥಳಕ್ಕೆ ಡಿವೈಎಸ್ಪಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಡಾಬಾ ಬಳಿ ಹೆಚ್ಚುವರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಇತ್ತ, ಎಸ್ಪಿ ಜಯಪ್ರಕಾಶ್ ಪ್ರತಿಕ್ರಿಯೆ ನೀಡಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆ: ಕೆರೂರಿನ ಡಾಬಾದ ಮೇಲೆ ದಾಳಿ: ಮಹಿಳೆಯರ ಮೇಲೆ ದೌರ್ಜನ್ಯ ಆರೋಪ ರಕ್ಷಣೆಗೆ ಮಹಿಳೆಯ ಆಗ್ರಹ: ಈ ದಾಳಿಯಿಂದ ಗಾಯಾಳುಗಳ ಸಂಬಂಧಿಕರು ಭಯಭೀತಿರಾಗಿದ್ದಾರೆ. ಅಲ್ಲದೇ, ಕೆಲವರು ವಿನಾಕಾರಣ ಮನೆಯಲ್ಲಿ ನುಗ್ಗಿ ಮಹಿಳೆಯರು ದೌರ್ಜನ್ಯ ಎಸೆಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮದು ತಪ್ಪಾಗಿದ್ದರೆ ಶಿಕ್ಷೆ ನೀಡಿ. ಏನು ತಪ್ಪು ಇಲ್ಲದಿದ್ದರೂ ಭಯ ಹುಟ್ಟಿಸುವ ನಿಟ್ಟಿನಲ್ಲಿ ಸಂಘಟನೆಯವರು ಅನ್ಯಾಯ ಮಾಡುತ್ತಿದ್ದಾರೆ. ಡಾಬಾದಲ್ಲಿ ನುಗ್ಗಿ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ನಮಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಹಲ್ಲೆಗೆ ಒಳಗಾದ ಸಂಬಂಧಿಕರಾದ ಬಿಸ್ಮಿಲ್ಲಾ ಎಂಬ ಮಹಿಳಾ ಒತ್ತಾಯಿದರು.
ಅಲ್ಲದೇ, ಕೆರೂರು ಗಲಾಟೆ ನಂತರ ಕೆಲ ಸಂಘಟನೆಯವರು ಬೆದರಿಕೆ ಹಾಕುತ್ತಿದ್ದಾರೆ. ನಮಗೆ ಜೀವನ ಬೆದರಿಕೆ ಬರುತ್ತಿದ್ದು, ಊರು ಬಿಟ್ಟು ಹೋಗುವಂತೆ ಭಯ ಹುಟ್ಟಿಸಲಾಗುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆಯವರು ನಮಗೆ ಭದ್ರತೆ ಒದಗಿಸಿಬೇಕು. ಈ ನಿಟ್ಟಿನಲ್ಲಿ ನಾವು ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಹಾಗೂ ಪ್ರಧಾನಿ ಮೋದಿ ಅವರಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದು ಬಿಸ್ಮಿಲ್ಲಾ ಹೇಳಿದರು.
ಇದನ್ನೂ ಓದಿ:ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು, ಇಬ್ಬರ ದುರ್ಮರಣ