ಬಾಗಲಕೋಟೆ :ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಪತ್ರ ಚಳವಳಿ ನಡೆಸುವ ಮೂಲಕ 9ನೇ ದಿನದ ಹೋರಾಟ ನಡೆಸಿದರು.
ಹೋರಾಟಕ್ಕೆ ಮಣಿಯದ ಸರ್ಕಾರದ ವಿರುದ್ಧ ಪತ್ರ ಚಳವಳಿ ನಡೆಸಿದ ಆಶಾ ಕಾರ್ಯಕರ್ತೆಯರು - ಆಶಾ ಕಾರ್ಯಕರ್ತೆಯರ ಪತ್ರ ಪ್ರತಿಭಟನೆ
ಆಶಾ ಕಾರ್ಯಕರ್ತೆಯರು 12 ಸಾವಿರ ರೂ. ವರೆಗೆ ವೇತನ ನಿಗದಿಗೊಳಿಸುವಂತೆ ಕಳೆದ ಹಲವು ದಿನಗಳಿಂದ ಹೋರಾಟ ಮಾಡಿದ್ರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ..
ಆಶಾ ಕಾರ್ಯಕರ್ತೆಯರು
ಕೋವಿಡ್-19 ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು 12 ಸಾವಿರ ರೂ. ವರೆಗೆ ವೇತನ ನಿಗದಿಗೊಳಿಸುವಂತೆ ಕಳೆದ ಹಲವು ದಿನಗಳಿಂದ ಹೋರಾಟ ಮಾಡಿದ್ರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಈ ಹಿನ್ನೆಲೆ ರಾಜ್ಯ ಸಂಘಟನೆ ಕರೆ ನೀಡಿದ ಹಿನ್ನೆಲೆ, ಇಂದು ಪತ್ರ ಚಳವಳಿ ನಡೆಸಲಾಯಿತು. ಜಿಲ್ಲಾ ಕೇಂದ್ರ ಸೇರಿ ತಾಲೂಕಿನ ವಿವಿಧ ಪ್ರದೇಶದಲ್ಲಿ ಅಂಚೆ ಇಲಾಖೆಗೆ ತೆರಳಿ ಮುಖ್ಯಮಂತ್ರಿಗಳಿಗೆ ವಿವಿಧ ಬೇಡಿಕೆ ಇರುವ ಮನವಿ ಪತ್ರ ಸಲ್ಲಿಸಿದರು.