ಕರ್ನಾಟಕ

karnataka

ETV Bharat / state

ವಿಶ್ವ ತಾಯಂದಿರ ದಿನದಂದು ಲಾಠಿ ಹಿಡಿದು ರಸ್ತೆಗಿಳಿದ ಆಶಾ ಕಾರ್ಯಕರ್ತೆಯರು!! - bagalkot news

ಕೊರೊನಾ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಮಾಹಿತಿಯನ್ನು ಪಡೆದುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ವಿಶ್ವ ಅಮ್ಮಂದಿರ ದಿನದ ಅಂಗವಾಗಿ ಇವರು ಸಹ ತಾಯಿ‌ ರೂಪದಲ್ಲಿ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ.

Asha workers
ಲಾಠಿ ಹಿಡಿದು ರಸ್ತೆಗಿಳಿದ ಆಶಾ ಕಾರ್ಯರ್ತೆಯರು

By

Published : May 10, 2020, 1:29 PM IST

ಬಾಗಲಕೋಟೆ :ವಿಶ್ವ ತಾಯಂದಿರ ದಿನದ ಅಂಗವಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕೈಯಲ್ಲಿ ಲಾಠಿ ಹಿಡಿದು ಬೀದಿಗಿಳಿದು ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಮಾಸ್ಕ್​ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುವವರಿಗೆ ಲಾಠಿ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ತಾಯಿಯಂತೆ ಬುದ್ಧಿ ಮಾತು ಹೇಳುತ್ತಿದ್ದಾರೆ. ಬೈಕ್​ಗಳನ್ನು ನಿಲ್ಲಿಸಿ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸಿ, ಮಾಸ್ಕ್ ಧರಿಸದವರಿಗೆ ಟವೆಲ್, ಖರ್ಚೀಫ್​ ಕಟ್ಟುವಂತೆ ತಿಳಿ ಹೇಳುತ್ತಿದ್ದಾರೆ.

ಲಾಠಿ ಹಿಡಿದು ರಸ್ತೆಗಿಳಿದ ಆಶಾ ಕಾರ್ಯಕರ್ತೆಯರು..

ಕೊರೊನಾ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಮಾಹಿತಿಯನ್ನು ಪಡೆದುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ವಿಶ್ವ ಅಮ್ಮಂದಿರ ದಿನದ ಅಂಗವಾಗಿ ಇವರು ಸಹ ತಾಯಿ‌ ರೂಪದಲ್ಲಿ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ.

ABOUT THE AUTHOR

...view details