ಬಾಗಲಕೋಟೆ : ಕೊರೊನಾ ಹಿನ್ನೆಲೆಯಲ್ಲಿ ಪ್ರತಿನಿತ್ಯ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆರಿಗೆ ಕಳೆದ ಮೂರು ತಿಂಗಳನಿಂದ ವೇತನ ಇಲ್ಲದ ಪರದಾಡುವಂತಾಗಿದೆ.
3 ತಿಂಗಳನಿಂದ ವೇತನ ಇಲ್ಲದೆ ಪರದಾಡುತ್ತಿರುವ ಆಶಾ ಕಾರ್ಯಕರ್ತೆಯರು - Asha activists
ಸರ್ಕಾರಿಂದ ಸಹಾಯ ಕೇಳಿದರೆ ಬಜೆಟ್ನಲ್ಲಿ ಅನುದಾನವಿಲ್ಲ ಅಂತಾರೆ. ವೇತನಕ್ಕಾಗಿ ಪ್ರತಿಭಟನೆ ಮಾಡಿದರು ಸರ್ಕಾರ ಸ್ಪಂದಿಸಿಲ್ಲ. ನಮಗೆ ಇದ್ದಷ್ಟು ವೇತನವಾದ್ರು ಸರ್ಕಾರ ಸರಿಯಾದ ಸಮಯಕ್ಕೆ ನೀಡಲಿ ಎಂದು ಮನವಿ ಮಾಡಿದರು.
ಮೂರು ತಿಂಗಳನಿಂದ ವೇತನ ಇಲ್ಲದ ಪರದಾಡುತ್ತಿರುವ ಆಶಾ ಕಾರ್ಯಕರ್ತೆಯರು
ಫ್ರಂಟ್ ಲೈನ್ ವಾರಿಯರ್ಸ್ ಎಂದು ಆಸ್ಪತ್ರೆ, ಸೇರಿ ಗ್ರಾಮೀಣ ಪ್ರದೇಶದಲ್ಲಿ, ನಗರ ಪ್ರದೇಶದಲ್ಲಿ ಸರ್ವೆ ಮಾಡಲು, ಕೊರೊನಾ ರೋಗಿಗಳ ಆರೈಕೆ ಮಾಡಲು ನೇಮಕ ಮಾಡಲಾಗಿದೆ. ಆದರೆ ಇಂತಹ ಕೊರೊನಾ ವಾರಿಯರ್ಸ್ಗೆ ಸೂಕ್ತ ವೇತನ ನೀಡುತ್ತಿಲ್ಲ ಎಂದು ಆಶಾ ಕಾರ್ಯಕರ್ತೆರು ಆರೋಪಿಸಿದ್ದಾರೆ.
ಗಂಡು ಮಕ್ಕಳು ಮನೆಯಲ್ಲಿ ಕುಳಿತುಕೊಂಡಿದ್ದಾರೆ. ನಮ್ಮ ಪ್ರಾಣದ ಹಂಗು ತೊರೆದು ಸೋಂಕಿತರ ಮನೆ ಕದ ತಟ್ಟಿ ಕರ್ತವ್ಯ ನಿಭಾಯಿಸುತ್ತಿದ್ದೇವೆ. ಸೋಂಕಿತರಿಗೆ ಧೈರ್ಯ ಹೇಳಿ ಕಚೇರಿಗೆ ಹೋದರೆ, ಕಚೇರಿಯಲ್ಲಿ ಅಧಿಕಾರಿಗಳು ಒಳಗೆ ಬರಬೇಡಿ ಎಂದು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.