ಬಾಗಲಕೋಟೆ: ನವನಗರದ ಸೆಕ್ಟರ್ ನಂ. 4ರಲ್ಲಿ ನೂತನ ಅನು ಸಂಗೀತ ವಿದ್ಯಾಲಯದ ಉದ್ಘಾಟನೆಯನ್ನು ಶಾಸಕರಾದ ಡಾ. ವೀರಣ್ಣ ಸಿ. ಚರಂತಿಮಠ ಅವರು ನೆರವೇರಿಸಿದರು.
ಅನು ಸಂಗೀತ ವಿದ್ಯಾಲಯ: ಉದ್ಘಾಟಿಸಿದ ಶಾಸಕ ಚರಂತಿಮಠ - naugurated by MLA Charanmati Math
ಬಾಗಲಕೋಟೆಯಲ್ಲಿ ಅನು ಸಂಗೀತ ವಿದ್ಯಾಲಯವನ್ನು ಶಾಸಕರಾದ ಡಾ. ವೀರಣ್ಣ ಸಿ. ಚರಂತಿಮಠ ಅವರು ಉದ್ಘಾಟಿಸಿದರು.

ಅನು ಸಂಗೀತ ವಿದ್ಯಾಲಯ
ನಂತರ ಮಾತನಾಡಿದ ಅವರು, ಸಂಗೀತಕ್ಕೆ ಬಹುದೊಡ್ಡ ಶಕ್ತಿ ಇದೆ. ಸಂಗೀತವನ್ನು ನಾವೆಲ್ಲರೂ ಆರಾಧಿಸಬೇಕು, ಪ್ರೀತಿಸಬೇಕು, ಬೆಳೆಸಬೇಕು ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಸಂಗೀತಕ್ಕೆ ಮಹತ್ವ ನೀಡಬೇಕು. ಆದ್ದರಿಂದ ನಮಗೆ ಬಹುದೊಡ್ಡ ಉಪಯೋಗವಿದೆ ಎಂದರು.
ಇದೇ ಸಂದರ್ಭದಲ್ಲಿ ಅನು ಸಂಗೀತ ವಿದ್ಯಾಲಯದ ಸಂಸ್ಥಾಪಕರಾದ ಪುಟ್ಟು ಹಿರೇಮಠ ಅವರಿಗೆ ಶುಭ ಕೋರಿ,ಈ ಸಂಗೀತ ವಿದ್ಯಾಲಯ ಬಹಳಷ್ಟು ಅಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು.