ಬಾಗಲಕೋಟೆ:ಶಿಲ್ಪಕಲೆ, ಚಿತ್ರಕಲೆ, ಬಡಿಗತನ, ಪತ್ತಾರಿಕೆಯು ವಿಶ್ವಕರ್ಮರ ಕಲೆಗಳಾಗಿದ್ದು, ಅವುಗಳಲ್ಲಿರುವ ಅಪಾರ ಜ್ಞಾನ ಯಾವ ವಿಶ್ವವಿದ್ಯಾಲಯಗಳಲ್ಲಿ ಇಲ್ಲ. ಹಾಗಾಗಿ ಈ ವಿಶ್ವಕರ್ಮರ ಪಾರಂಪರಿಕ ಸಂಸ್ಕೃತಿ ಉಳಿಯಬೇಕಾಗಿದೆ ಎಂದು ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.
ಅವರು ಇಲ್ಲಿನ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನಡೆದ ಬಾಗಲಕೋಟೆ ವಿಶ್ವಕರ್ಮ ವಿದ್ಯಾವಿಕಾಸ ಸಂಸ್ಥೆಯ 30ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.