ಬಾಗಲಕೋಟೆ:ಜಿಲ್ಲಾ ಪಂಚಾಯ್ತಿ ಪ್ರಸಕ್ತ ಸಾಲಿನ ವಿವಿಧ ಕಾರ್ಯಯೋಜನೆಯ ಒಟ್ಟು 364.37 ಕೋಟಿ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆ ಜಿಲ್ಲಾ ಪಂಚಾಯ್ತಿ 12ನೇ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆಗೊಂಡಿತು.
ಜಿ.ಪಂ ಸಭಾಭವನದಲ್ಲಿ ಬಾಯಕ್ಕ ಮೇಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪ್ರಸಕ್ತ ಸಾಲಿಗೆ ಪಂಚಾಯತ್ ರಾಜ್ ಇಲಾಖೆಗೆ 566.03 ಲಕ್ಷ, ಸಾಮಾನ್ಯ ಶಿಕ್ಷಣಕ್ಕೆ 18255.37 ಲಕ್ಷ ರೂ. ವಯಸ್ಕರ ಶಿಕ್ಷಣ ಇಲಾಖೆಗೆ 35.94 ಲಕ್ಷ, ಕ್ರೀಡೆ ಮತ್ತು ಯುವಜನ ಸೇವೆಗಳಿಗೆ 139.20 ಲಕ್ಷ, ಕಲೆ ಮತ್ತು ಸಂಸ್ಕೃತಿಗೆ 8.63 ಲಕ್ಷ, ಆರೋಗ್ಯ ಇಲಾಖೆಗೆ 6,615.76 ಲಕ್ಷ, ಆಯುಷ್ ಇಲಾಖೆಗೆ 316.91 ಲಕ್ಷ, ಸಮಾಜ ಕಲ್ಯಾಣ ಇಲಾಖೆಗೆ 2,728.26 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 4,098.93 ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ 488.57 ಲಕ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 98.56 ಲಕ್ಷ ರೂ.ಗಳ ಅನುದಾನ ನಿಗದಿಪಡಿಸಲಾಯಿತು.
ತೋಟಗಾರಿಕಾ ಇಲಾಖೆಗೆ 482.88 ಲಕ್ಷ, ಕೃಷಿ ಇಲಾಖೆಗೆ 104.74 ಲಕ್ಷ, ಭೂಸಾರ ಮತ್ತು ಜಲ ಸಂರಕ್ಷಣೆಗೆ 130.10 ಲಕ್ಷ, ಪಶು ಸಂಗೋಪನೆ 312.57 ಲಕ್ಷ, ಮೀನುಗಾರಿಕೆ 88.70 ಲಕ್ಷ, ಅರಣ್ಯ ಮತ್ತು ವನ್ಯಜೀವಿ ಇಲಾಖೆ 820.12 ಲಕ್ಷ, ಸಹಕಾರಕ್ಕೆ 4 ಲಕ್ಷ, ಇತರೆ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳಿಗೆ 412.89 ಲಕ್ಷ, ಗ್ರಾಮೀಣ ಮತ್ತು ಸಣ್ಣ ಉದ್ಯಮಗಳು 67.49 ಲಕ್ಷ, ರೇಷ್ಮೆ 513.05 ಲಕ್ಷ, ಕೈಮಗ್ಗ ಮತ್ತು ಜವಳಿ 86.15 ಲಕ್ಷ, ಇತರೆ ವಿಜ್ಞಾನ ಸಂಶೋಧನೆ 7 ಲಕ್ಷ, ಸಚಿವಾಲಯ ಆರ್ಥಿಕ ಸೇವೆಗಳು ಜಿಲ್ಲಾ ಯೋಜನಾ ಘಟಕಕ್ಕೆ 50.92 ಲಕ್ಷ ಹಾಗೂ ಕೃಷಿ ಮಾರುಕಟ್ಟೆ (ಇತರೆ ಸಾಮಾನ್ಯ ಆರ್ಥಿಕ ಸೇವೆಗಳು)ಗೆ 4.41 ಲಕ್ಷ ರೂ.ಗಳ ಅನುದಾನ ನಿಗದಿಪಡಿಸಲಾಯಿತು.
ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ಪಂಚಾಯಿತಿ ಸಿಇಓ ಟಿ.ಭೂಬಾಲನ, ಜಿ.ಪಂ ಎಲ್ಲ ಸಮಿತಿಯ ಅಧ್ಯಕ್ಷರು, ಸದಸ್ಯರು, ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಪ್ರಭು ಮಾನೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.