ಬಾಗಲಕೋಟೆ: ರಾತ್ರಿ ಇಡೀ ಮಳೆ ಸುರಿದಿರುವ ಹಿನ್ನಲೆ, ಜಿಲ್ಲೆಯ ಅಕ್ಕತಂಗಿಯ ಫಾಲ್ಸ್ ತುಂಬಿ ಹರಿಯುತ್ತಿದೆ. ಇಲ್ಲಿನ ಭೂತನಾಥ ದೇವಾಲಯ ಹಿಂಭಾಗ ಹರಿಯುವ ಫಾಲ್ಸ್ ಇದೀಗ ಮಳೆಯಿಂದ ತುಂಬಿದ್ದು ನೋಡುಗರನ್ನು ಸೆಳೆಯುತ್ತಿದೆ.
ಮಳೆಯಬ್ಬರಕ್ಕೆ ಮೈದುಂಬಿ ಧುಮ್ಮಿಕ್ಕುತ್ತಿದೆ ಅಕ್ಕ-ತಂಗಿ ಫಾಲ್ಸ್ - North Karnataka Rain
ರಾಜ್ಯದ ಹಲವೆಡೆ ಮಳೆಯಬ್ಬರ ಜೋರಾಗಿದೆ. ಇನ್ನೂ ತಡರಾತ್ರಿ ಸುರಿದ ಮಳೆಯಿಂದಾಗಿ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಇಲ್ಲಿನ ಅಕ್ಕ-ತಂಗಿ ಫಾಲ್ಸ್ ಮೈದುಂಬಿ ಹರಿಯುತ್ತಿದೆ.
ಅಕ್ಕ-ತಂಗಿ ಫಾಲ್ಸ್
ಬಳಿಕ ಈ ನೀರು ಅಗಸ್ತ್ಯ ತೀರ್ಥ ಹೊಂಡಕ್ಕೆ ಸೇರುತ್ತದೆ. ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಹೊಂಡವು ತುಂಬಿತ್ತು. ಈಗ ಮತ್ತೆ ನೀರು ಹರಿದು ಬರುತ್ತಿರುವ ಪರಿಣಾಮ ಹೊಂಡದಿಂದ ನೀರು ಹೂರಗೆ ಹರಿಯುತ್ತಿದೆ. ಈ ಕ್ಷಣ ಕಣ್ತುಂಬಿಕೊಳ್ಳಲು ಸ್ಥಳಿಯರು ತಂಡೋಪತಂಡವಾಗಿ ಜನ ಆಗಮಿಸುತ್ತಿದ್ದಾರೆ.
ಗುಹಾಲಯ ಹಾಗೂ ಭೂತನಾಥ ದೇವಾಲಯ ಮಧ್ಯೆ ಫಾಲ್ಸ್ ಹರಿಯುತ್ತಿರುವುದು ಸ್ಥಳಿಯರನ್ನು ಇತ್ತ ಕೈಬಿಸಿ ಕರೆಯುತ್ತಿದೆ.