ಕರ್ನಾಟಕ

karnataka

ETV Bharat / state

‘I Love Taliban​​​’.. ಉಗ್ರರ ಪರ ಎಫ್​ಬಿ ಪೋಸ್ಟ್, ಬಾಗಲಕೋಟೆಯಲ್ಲಿ ಆರೋಪಿ ಅರೆಸ್ಟ್​ - man-arrested-for-pro-taliban-post

ತಾಲಿಬಾನಿಗಳ ಅಟ್ಟಹಾಸಕ್ಕೆ ವಿಶ್ವದೆಲ್ಲೆಡೆ ಖಂಡನೆ ವ್ಯಕ್ತವಾಗ್ತಿದೆ. ಆದರೆ ರಾಜ್ಯದ ಜಮಖಂಡಿ ವ್ಯಕ್ತಿಯೋರ್ವ ತಾಲಿಬಾನ್ ಬೆಂಬಲಿಸಿ ಪೋಸ್ಟ್​ವೊಂದನ್ನು ಬರೆದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

man-arrested-for-pro-taliban-post
ರಾಕ್ಷಸರ ಬೆಂಬಲಿಸಿ ಎಫ್​ಬಿ ಪೋಸ್ಟ್ ಮಾಡಿದ್ದಾತನ ಬಂಧನ

By

Published : Aug 22, 2021, 9:17 AM IST

ಬಾಗಲಕೋಟೆ:ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರು ಅಟ್ಟಹಾಸ ಮೆರೆಯುತ್ತಿರುವ ನಡುವೆ ತಾಲಿಬಾನ್​​ ಬೆಂಬಲಿಸಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಫೇಸ್​​ಬುಕ್​ನಲ್ಲಿ ಐ ಲವ್ ತಾಲಿಬಾನ್(I Love Taliban)​ ಎಂದು ಪೋಸ್ಟ್ ಮಾಡಿದ್ದ ಆರೋಪಿ ಜಮಖಂಡಿಯ ಆಸೀಫ್​ ಗಲಗಲಿ ಎಂಬಾತನನ್ನು ಬಂಧಿಸಲಾಗಿದೆ.

ಈತ ತನ್ನ ಫೇಸ್‍ಬುಕ್ ಪೋಸ್ಟ್​​ನಲ್ಲಿ ಐ ಲವ್ ತಾಲಿಬಾನಿ ಎಂದು ಬರೆದುಕೊಂಡಿದ್ದ. ಈ ಪೋಸ್ಟ್ ವೈರಲ್ ಆಗಿತ್ತು. ಈ ಬಗ್ಗೆ ಸ್ವಧರ್ಮಿಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ದೇಶದ್ರೋಹದ ಕೃತ್ಯ ಖಂಡಿಸಿ ಆತನನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಈ ಪೋಸ್ಟ್ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪೋಸ್ಟ್ ವೈರಲ್ ಆದ ಬಳಿಕ ಆಸೀಫ್ ಗಲಗಲಿ ನಾಪತ್ತೆಯಾಗಿದ್ದ, ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಘಟನೆ ಸಂಬಂಧ ಜಮಖಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಜೀವನ್ಮರಣದ ಹೋರಾಟ ನಡೆಸಿ ಅಫ್ಘಾನಿಸ್ತಾನದಿಂದ ಪಾರಾಗಿ ಬಂದ ಗದಗದ ವೀರ ಯೋಧ

ABOUT THE AUTHOR

...view details