ಬಾಗಲಕೋಟೆ:ವ್ಯಕ್ತಿಯೋರ್ವರಿಂದ ಲಂಚ ಸ್ವೀಕಾರಿಸುವಾಗ ಎಸಿಬಿ ಪೊಲೀಸರು ದಾಳಿ ಮಾಡಿ ಕಂದಾಯ ನಿರೀಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಬೀಳಗಿಯ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುಸೇನ್ ಲಿಂಗನ್ನವರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಂದೆಯ ಹೆಸರಲ್ಲಿದ್ದ ನಿವೇಶನ ಪತ್ರದಲ್ಲಿ ಮಗನ ಹೆಸರು ಸೇರಿಸುವ ಸಲುವಾಗಿ ಕಚೇರಿಗೆ ತೆರಳಿದ್ದ ಹನಮಂತ ಹಳ್ಳಿ ಎಂಬುವವರಿಗೆ 3 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಹನಮಂತ ಪೊಲೀಸರಿಗೆ ದೂರು ನೀಡಿದ್ದರು.