ಕರ್ನಾಟಕ

karnataka

ETV Bharat / state

ಅಂಕಪಟ್ಟಿ ಡಿಜಿಟಲೀಕರಣಕ್ಕೆ ಹಣ ಲೂಟಿ ಆರೋಪ: ಬಾಗಲಕೋಟೆಯಲ್ಲಿ ಪ್ರತಿಭಟನೆ - ಬಾಗಲಕೋಟೆ ಎಬಿವಿಪಿ ಸಂಘಟನೆ

ವಿಶ್ವವಿದ್ಯಾಲದಲ್ಲಿ ಇಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಶನ್ ಸಿಸ್ಟಮ್ (ಇಡಿಜಿಎಸ್​) ತಂತ್ರಾಂಶ ಬಳಸುವ ಸರ್ಕಾರದ ಕ್ರಮ ಖಂಡಿಸಿ ಬಾಗಲಕೋಟೆ ನಗರದಲ್ಲಿ ಎಬಿವಿಪಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಬಾಗಲಕೋಟೆಯಲ್ಲಿ ಎಬಿವಿಪಿ ಸಂಘಟನೆಯಿಂದ ಪ್ರತಿಭಟನೆ

By

Published : Nov 9, 2019, 8:35 AM IST

ಬಾಗಲಕೋಟೆ: ವಿಶ್ವವಿದ್ಯಾಲದಲ್ಲಿ ಇಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಶನ್ ಸಿಸ್ಟಮ್ (ಇಡಿಜಿಎಸ್​) ತಂತ್ರಾಂಶ ಬಳಸುವ ಹೆಸರಿನಲ್ಲಿ ಪ್ರತಿ ಅಂಕಪಟ್ಟಿಗೆ 156 ರೂ.ಗಳನ್ನೂ ವಿದ್ಯಾರ್ಥಿಗಳಿಂದ ವಸೂಲಿ ಮಾಡಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ ಬಾಗಲಕೋಟೆ ನಗರದಲ್ಲಿ ಎಬಿವಿಪಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಅಂಕಪಟ್ಟಿ ಡಿಜಿಟಲೀಕರಣಕ್ಕೆ ಹಣ ಲೂಟಿ ಆರೋಪ: ಬಾಗಲಕೋಟೆಯಲ್ಲಿ ಪ್ರತಿಭಟನೆ

ಬಸವೇಶ್ವರ ಮಹಾವಿದ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿದ್ದರಿಂದ ಕೆಲಕಾಲ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ABOUT THE AUTHOR

...view details