ಬಾಗಲಕೋಟೆ:ಕಾಂತಾರ ಸಿನಿಮಾ ದೇಶದಲ್ಲಿ ಹವಾ ಮಾಡಿದ ಬೆನ್ನಲ್ಲೆ ಈಗ ಆಸ್ಕರ್ ಪ್ರಶಸ್ತಿ ಸಿಗುವಂತಾಗಬೇಕು ಎಂದು ಅಭಿಮಾನಿಗಳ ಒತ್ತಾಯ ಸಹ ಹೆಚ್ಚಾಗಿದೆ. ಇಂತಹ ಅಭಿಮಾನಿಯೊಬ್ಬರು ಇದೀಗ ತಾವು ಮಾಡುವ ನೇಕಾರಿಕೆ ಕೆಲಸದಲ್ಲಿ ತಮ್ಮದೇ ಆದ ಶೈಲಿಯಲ್ಲಿ ನೇಯುವ ಮೂಲಕ ಕಾಂತಾರ ಸಿನಿಮಾಕ್ಕೆ ಆಸ್ಕರ್ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ಇಳಕಲ್ ಕಾಟನ್ ಸೀರೆಯು ಸಹ ದೇಶದಲ್ಲಿ ಹೆಸರು ವಾಸಿ ಮಾಡಿದೆ.
ವಿನ್ ಎಟ್ ಆಸ್ಕರ್ ಕಾಂತಾರ ಎಂದು ಸೀರೆಯಲ್ಲಿ ನೇಯ್ದ ನೇಕಾರ ಇಂತಹ ಸೀರೆಯಲ್ಲಿ ಮೇಘರಾಜ ಉದಗಟ್ಟಿ ಎಂಬ ಯುವ ನೇಕಾರ ವಿನ್ ಎಟ್ ಆಸ್ಕರ್ ಕಾಂತಾರ ಎಂದು ಅಕ್ಷರ ಕಾಣುವಂತೆ ನೇಯುವ ಮೂಲಕ ಗಮನ ಸೆಳೆದಿದ್ದಾರೆ. ಮೇಘರಾಜ ಈ ಹಿಂದೆ ಶ್ರೀರಾಮ ಮಂದಿರ, ಅಪ್ಪು ಚಿತ್ರ ಸೇರಿದಂತೆ ಇತರ ಬಗೆಯ ಚಿತ್ರಗಳನ್ನು ಸೀರೆಯಲ್ಲಿ ಕಾಣುವಂತೆ ನೇಯ್ದು,ಇಳಕಲ್ ಸೀರೆ ಪ್ರಸಿದ್ಧಿ ಆಗುವಂತೆ ಮಾಡುತ್ತಿದ್ದಾರೆ.
ಈಗ ಪ್ರಸಕ್ತವಾಗಿ ಕಾಂತಾರ ಸಿನೆಮಾ ಹೆಚ್ಚು ಹವಾ ಮಾಡಿದ್ದು, ಅದರ ಬಗ್ಗೆ ಚರ್ಚೆ ಆಗುತ್ತಿದೆ. ಈ ಹಿನ್ನಲೆ ಹೊಸ ಹೊಸ ಯೋಚನೆ ಮಾಡುತ್ತಿರುವ ಮೇಘರಾಜ ಈಗ ಕಾಂತಾರ ಸಿನೆಮಾಗೆ ಆಸ್ಕರ್ ಎಂಬ ಅಕ್ಷರ ಕಾಣುವಂತೆ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ಸೀರೆಯು ಕಾಂತಾರ ಚಿತ್ರ ನಿರ್ಮಾಣ ಮಾಡಿರುವ ರಿಷಬ್ ಶೆಟ್ಟಿ ಅವರಿಗೆ ಕಾಣಿಕೆ ನೀಡಬೇಕು ಎಂಬ ಆಸೆ ಇಟ್ಟುಕೊಂಡು ಹೀಗೆ ತನ್ನ ಕಾಯಕದಲ್ಲಿಯೂ ಸಹ ಹೊಸತನ ಕಾಣುವಂತೆ ಮಾಡಿದ್ದಾನೆ.
ಇದನ್ನೂ ಓದಿ:ಉಡುಪಿ: ರಂಗೋಲಿಯಲ್ಲಿ ಮೂಡಿದ ಕಾಂತಾರ
ಇವರ ಪ್ರೋತ್ಸಾಹಕ್ಕೆ ಸ್ಥಳೀಯರು ಸಹ ಮೆಚ್ಚುಗೆ ವ್ಯಕ್ಯ ಪಡಿಸಿದ್ದಾರೆ. ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ನಶಿಸಿ ಹೋಗುತ್ತಿರುವ ಇಳಕಲ್ ಸೀರೆಗೆ ಫ್ಯಾಷನ್ ಟಚ್ ಹಾಗೂ ಈ ರೀತಿಯಾಗಿ ಏನಾದರೂ ಆಲೋಚನೆ ಮಾಡುವ ಮೂಲಕ ಸೀರೆಗೆ ಕಳೆ ಬರುವಂತೆ ಮಾಡಲಾಗಿದೆ. ಕಾಂತಾರ ಸಿನೆಮಾ ಹವಾ ದಿಂದ ಅದಕ್ಕೆ ಆಸ್ಕರ್ ಸಿಗುವಂತಾಗಬೇಕು ಹಾಗೂ ಈ ಸೀರೆಯನ್ನು ರಿಷಬ್ ಶೆಟ್ಟಿಗೆ ಕಾಣಿಕೆಯಾಗಿ ನೀಡಬೇಕು ಎಂದು ಅಭಿಲಾಷೆ ಹೊಂದಿರುವ ಈ ಯುವಕನ ಆಸೆಯು ಶೀಘ್ರವಾಗಿ ಇಡೇರಲಿ.