ಬಾಗಲಕೋಟೆ: ಬಡತನದ ಮಧ್ಯೆಯೂ ಬದುಕು ಸಾಗಿಸುತ್ತ ತನ್ನ ಮೂವರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಪರಿಣಾಮ ಓರ್ವ ಮಗಳು ಈಗ ಎಂಎ ಪದವಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ತಂದೆಯ ಸಂಕಷ್ಟದ ದಿನಗಳಲ್ಲಿಯೇ ಓದಿದ ಮಗಳು ರುಬಿನಾ ಇದೀಗ ಫಸ್ಟ್ ರ‍್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ. ಈ ಮೂಲಕ ಮುಂದಿನ ಶಿಕ್ಷಣಕ್ಕಾಗಿ ಸರ್ಕಾರದಿಂದ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾಳೆ.
ಗ್ಯಾರೇಜ್ನಲ್ಲಿ ಕೆಲಸ ಮಾಡಿ ಮಗಳ ಉನ್ನತ ಶಿಕ್ಷಣ ಪಡೆಯಲಿ ಎಂದು ಆಸೆ ಪಡುತ್ತಿರುವ ತಂದೆ ಹೆಸರು ರಫೀಕ್ ಲೋಕಾಪೂರ. ವೃತ್ತಿಯಿಂದ ಮೆಕಾನಿಕ್ ಆಗಿರೋ ಇವರು ಬಡತನದ ಮಧ್ಯೆ ಜೀವನ ಕಳೆದ್ರೂ ತನ್ನ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಗಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಎರಡನೇ ಮಗಳು ರುಬಿನಾ ರಾಣಿ ಚೆನ್ನಮ್ಮ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರದ ಅರ್ಥಶಾಸ್ತ್ರ ವಿಭಾಗದಲ್ಲಿ ಫಸ್ಟ್ ರ‍್ಯಾಂಕ್ ಪಡೆದುಕೊಂಡಿದ್ದಾರೆ.