ಕರ್ನಾಟಕ

karnataka

ETV Bharat / state

ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ಸಾವು - ಬಾಗಲಕೋಟೆಯಲ್ಲಿ ತ್ರೀವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ನೀರುಪಾಲು

ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆದಿದೆ.

ಕಾಲು ಜಾರಿ ಬಿದ್ದು ಗರ್ಭಿಣಿ ನೀರುಪಾಲು
ಕಾಲು ಜಾರಿ ಬಿದ್ದು ಗರ್ಭಿಣಿ ನೀರುಪಾಲು

By

Published : Jan 4, 2022, 9:57 PM IST

ಬಾಗಲಕೋಟೆ:ದೇವಸ್ಥಾನಕ್ಕೆ ಬಂದಿರುವ ಮಹಿಳೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲುಜಾರಿ ಬಿದ್ದು ಗರ್ಭಿಣಿಯೋರ್ವಳು ಮೃತಪಟ್ಟಿರುವ ಘಟನೆ ಕೂಡಲಸಂಗಮದಲ್ಲಿ ನಡೆದಿದೆ. ಜ್ಯೋತಿ ಶರಣಪ್ಪ ಬುಡಕಹಳ್ಳಿ(23 ) ಮೃತ ಮಹಿಳೆ.

ಕುಟುಂಬ ಸಮೇತರಾಗಿ ಗದಗ ನಗರದ ದಾಸರ ಓಣಿಯ ನಿವಾಸಿಗಳು ಸಂಗಮನಾಥನ ದೇವಸ್ಥಾನಕ್ಕೆ ಬಂದಿದ್ದರು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ನದಿಗೆ ಬಿದ್ದು ಜ್ಯೋತಿ ಮೃತಪಟ್ಟಿದ್ದಾಳೆ. ಮೃತಳು 4 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.

ಮಹಿಳೆಯ ಸಾವು ಕುಟುಂಬದ ಆಕ್ರಂದನಕ್ಕೆ ಕಾರಣವಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ, ಈಜುಗಾರರೊಂದಿಗೆ, ಮಹಿಳೆಯ ಶವ ಹೊರ ತೆಗೆಯಲಾಗಿದ್ದು, ಈ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ.

For All Latest Updates

TAGGED:

ABOUT THE AUTHOR

...view details