ಬಾಗಲಕೋಟೆ: ಮಾನಸಿಕ ಅಸ್ವಸ್ಥ ಯುವಕನೋರ್ವ ಕಳೆದ 20 ವರ್ಷಗಳಿಂದಲೂ ಬಂಧನದಲ್ಲೇ ಇದ್ದು, ಮನೆಯ ಹೊರಗಿನ ಕಟ್ಟೆಯಲ್ಲಿಯೇ ದಿನ ದೂಡುತ್ತಿದ್ದಾನೆ.
20 ವರ್ಷಗಳಿಂದಲೂ ಬಂಧಿಯಾದ ಮಾನಸಿಕ ಅಸ್ವಸ್ಥ: ಮನೆಯ ಕಟ್ಟೆಯೇ ಈತನ ವಾಸಸ್ಥಾನ! - Bagalakote news
ರಬಕವಿ-ಬನಹಟ್ಟಿ ನಗರದ ಅಮ್ಜದ್ ಖಾನ ಮುಲ್ಲಾ ಎಂಬ 26 ವರ್ಷದ ಯುವಕ ಕಳೆದ 20 ವರ್ಷಗಳಿಂದಲೂ ಕಟ್ಟೆಯ ಮೇಲೆಯೇ ಬಂಧಿಯಾಗಿದ್ದಾನೆ. ಈತನ ಸಹಾಯಕ್ಕೆ ಹಾಗೂ ಈತನ ಕುಟುಂಬಕ್ಕೆ ನೆರವು ನೀಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ರಬಕವಿ- ಬನಹಟ್ಟಿ ನಗರದ ಅಮ್ಜದ್ ಖಾನ್ ಮುಲ್ಲಾ ಎಂಬ 26 ವರ್ಷದ ಯುವಕ ಕಳೆದ 20 ವರ್ಷಗಳಿಂದಲೂ ಕಟ್ಟೆಯ ಮೇಲೆಯೇ ಸಮಯ ಕಳೆಯುತ್ತಿದ್ದಾನೆ. ಹುಟ್ಟಿದಾಗನಿಂದಲೂ ಮಾನಸಿಕ ಅಸ್ವಸ್ಥತೆ ಹೊಂದಿರುವ ಈತನನ್ನು ಬಂಧನದಿಂದ ವಿಮುಕ್ತಿಗೊಳಿಸಿದರೆ ಎಲ್ಲಿ ಹೋಗುತ್ತಾನೋ ಎಂಬ ಭಯವೇ ಇದಕ್ಕೆ ಕಾರಣವಂತೆ. ಹೀಗಾಗಿ ಈತನ ಪೋಷಕರು ಇವನಿಗೆ ಹಗ್ಗ ಕಟ್ಟಿ ಮನೆಯ ಹೊರಗಿರುವ ಕಟ್ಟೆಯಲ್ಲಿಯೇ ಕೂರುವಂತೆ ಮಾಡಿದ್ದಾರೆ.
ಈತನ ತಂದೆ ಮೃತಪಟ್ಟಿದ್ದು, ತಾಯಿಯ ಆಶ್ರಯದಲ್ಲಿ ಈತ ಬೆಳೆಯುತ್ತಿದ್ದಾನೆ. ಈ ಕುಟುಂಬ ಬಡತನದ ಸಂಕಷ್ಟ ಅನುಭವಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಯುವಕನ ಚಿಕಿತ್ಸೆಗೆ ನೆರವಾಗಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.