ಬಾಗಲಕೋಟೆ: ಕೌಟುಂಬಿಕ ಕಲಹದಿಂದ ಬೇಸತ್ತ ಪತಿಯೊಬ್ಬ ಪತ್ನಿಯನ್ನು ರಾಡ್‌ನಿಂದ ಕೊಲೆಗೈದ ಘಟನೆ ಇಳಕಲ್ ಪಟ್ಟಣದಲ್ಲಿ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದ ತಾಯಿಯ ಶವದ ಮುಂದೆ ಚಿಕ್ಕ ಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುವಂತಿತ್ತು.
ಮದೀನಾ ಬಂಡಿ (27) ಕೊಲೆಯಾದ ಗೃಹಿಣಿ. ಕಳೆದ ರಾತ್ರಿ ಪತಿ ಮೆಹಬೂಬ್ ಬಂಡಿ ಕುಡಿದ ಮತ್ತಿನಲ್ಲಿ ಪತ್ನಿಯ ಜೊತೆ ಜಗಳವಾಡಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ರಾತ್ರಿ 1 ಗಂಟೆಗೆ ಸುಮಾರಿಗೆ ಮಕ್ಕಳ ಎದುರೇ ಪತ್ನಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ.