ಬಾಗಲಕೋಟೆ: ಪತಿಯೇ ತನ್ನ ಹೆಂಡತಿಯನ್ನು ಗುದ್ದಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಂಗಾನಟ್ಟಿ ಗ್ರಾಮದಲ್ಲಿ ನಡೆದಿದೆ.
ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯ ತಲೆ ಮತ್ತು ಮುಖಕ್ಕೆ ಹೊಡೆದ ಪತಿ ಆಕೆಯನ್ನು ದಾರುಣವಾಗಿ ಹತ್ಯೆ ಮಾಡಿದ್ದಾನೆ. 48 ವರ್ಷ ವಯಸ್ಸಿನ ಪತ್ನಿಯನ್ನು ಪತಿ ಮಲ್ಲಪ್ಪ ಉಳ್ಳಾಗಡ್ಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಮಹಿಳೆ ಹಾಗೂ ಶ್ರೀಶೈಲ ಎಂಬುವನ ಮಧ್ಯೆ ವಿವಾಹೇತರ ಸಂಬಂಧ ಇತ್ತು ಎನ್ನಲಾಗ್ತಿದೆ. ಈ ಕಾರಣಕ್ಕೆ 2017 ರಲ್ಲಿ ಜಗಳ ಮಾಡಿ, ಶ್ರೀಶೈಲ ಎಂಬಾತನಿಗೆ ಹೊಡೆದ ಮಲ್ಲಪ್ಪ ಕೊಲೆ ಯತ್ನ ನಡೆಸಿದ್ದನಂತೆ. ಆಗ ಗಂಡನ ವಿರುದ್ಧವೇ ಹೆಂಡತಿ ಸಾಕ್ಷಿ ಹೇಳಿದ್ದಳು ಎಂದು ತಿಳಿದುಬಂದಿದೆ.
ಜೈಲಿನಿಂದ ಜಾಮೀನು ಪಡೆದು ಬಂದು ಪತ್ನಿ ಕೊಂದ ಪತಿರಾಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಂದ ಮಲ್ಲಪ್ಪ ಪತ್ನಿ ಕೊಲೆಗೆ ಸಂಚು ಮಾಡಿ ಇವತ್ತು ಕೊಲೆಗೈದು ಪರಾರಿಯಾದ್ದಾನೆ.