ಬಾಗಲಕೋಟೆ: ಮದುವೆ ಆಗಲು ನಿರಾಕರಣೆ ಮಾಡಿದ ಪ್ರಿಯತಮೆಯನ್ನು ಪ್ರಿಯಕರನೇ ಕುತ್ತಿಗೆ ಹಿಚುಕಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ತಾಂಡದಲ್ಲಿ ನಡೆದಿದೆ.
ಮದುವೆ ಆಗಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನೇ ಕೊಂದ ಪ್ರಿಯಕರ - ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ತಾಂಡ
ಮಂಜುಳಾ ಲಮಾಣಿ (22) ಎಂಬುವವರೇ ಕೊಲೆಯಾಗಿರುವ ಯುವತಿ. ತೆಗ್ಗಿ ಗ್ರಾಮದ ಅವೆಣ್ಣಪ್ಪ ಕಳಸನವರ (25) ಕೊಲೆ ಮಾಡಿರುವ ಯುವಕ. ಕಳೆದ ಎರಡು ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕೊಲೆಯಾದ ಯುವತಿ
ಮಂಜುಳಾ ಲಮಾಣಿ (22) ಎಂಬುವವರೇ ಕೊಲೆಯಾಗಿರುವ ಯುವತಿ. ತೆಗ್ಗಿ ಗ್ರಾಮದ ಅವೆಣ್ಣಪ್ಪ ಕಳಸನವರ (25) ಕೊಲೆ ಮಾಡಿರುವ ಯುವಕ. ಕಳೆದ ಎರಡು ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ರಾತ್ರಿ ಸಮಯದಲ್ಲಿ ಮಾತನಾಡಲು ಕರೆದ ಪ್ರಿಯಕರ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಗಲಾಟೆಗೆ ನಡೆದಿದೆ.
ಆಗ ಯುವಕ ಕುತ್ತಿಗೆ ಕೈ ಹಾಕಿ ಜೋರಾಗಿ ಹಿಚುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಸಲಾಗುತ್ತಿದೆ.
TAGGED:
bagalakote