ಬಾಗಲಕೋಟೆ:ಕೊರೊನಾ ವೈರಸ್ ಭೀತಿ ಹಿನ್ನೆಲೆ, ಸಾವಜಿ ಹೊಟೇಲ್ ಉದ್ಯಮ ಸಂಕಷ್ಟಕ್ಕೆ ಒಳಗಾಗಿದೆ ಎಂದು ಈಟಿವಿ ಭಾರತ ವರದಿ ಮಾಡಿತ್ತು. ಇದೇ ವರದಿಯ ಲಿಂಕ್ ಅನ್ನು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಬಾಗಲಕೋಟೆ ನಗರದ ನಿವಾಸಿ ತಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
ಸಾವಜಿ ಹೊಟೇಲ್ ಉದ್ಯಮಕ್ಕೆ ಭಾರಿ ನಷ್ಟ: ಸಿಎಂ, ಪಿಎಂಗೆ ಟ್ವೀಟ್ ಮಾಡಿದ ಉದ್ಯಮಿ - A hotel businessman tweeted to CM, PM
ಸಾವಜಿ ಹೋಟೆಲ್ ಮಾಲಕರಾದ ಶ್ರೀನಿವಾಸ ಕಾಟವಾ ಎಂಬುವರು ಈಟಿವಿ ಭಾರತ ವರದಿಯ ಲಿಂಕ್ನ್ನು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಸಮಸ್ಯೆಗೆ ಸ್ಪಂದಿಸುವಂತೆ ಕೋರಿದ್ದಾರೆ.
ಸಾವಜಿ ಹೊಟೇಲ್
ಸಾವಜಿ ಹೋಟೆಲ್ ಮಾಲಕರಾದ ಶ್ರೀನಿವಾಸ ಕಾಟವಾ ಮಾತನಾಡಿ, ಮುಂದೇನು ಪರಿಸ್ಥಿತಿ ಎಂದು ದಿಕ್ಕೇ ತೋಚದಂತಾಗಿದೆ. ಹೋಟೆಲ್ ಯಾವಾಗ ಪ್ರಾರಂಭ ಆಗುತ್ತೆ? ಮತ್ತೆ ನಮ್ಮ ವ್ಯಾಪಾರ ವಹಿವಾಟು ಯಾವಾಗ ನಡೆಯುತ್ತೆ ಎಂಬ ಚಿಂತೆ ಇದ್ದು, ಈ ಬಗ್ಗೆ ಸೂಕ್ತ ಸಹಾಯ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ.