ಕರ್ನಾಟಕ

karnataka

ETV Bharat / state

ಬಾದಾಮಿ: ನೆಚ್ಚಿನ ಶಿಕ್ಷಕ ವರ್ಗ, ಗಳಗಳನೆ ಅತ್ತ ಮಕ್ಕಳು.. ಕಾಲಿಗೆ ನಮಸ್ಕರಿಸಿ ಬೀಳ್ಕೊಡುಗೆ - ನೆಚ್ಚಿನ ಶಿಕ್ಷಕ ವರ್ಗಕ್ಕೆ ಗಳಗಳನೆ ಅತ್ತ ಮಕ್ಕಳು

ಬಾದಾಮಿ ತಾಲೂಕಿನ ಅನವಾಲ ಗ್ರಾಮದ ಶಿಕ್ಷಕರೊಬ್ಬರು ಬೇರೆ ಗ್ರಾಮಕ್ಕೆ ವರ್ಗಾವಣೆ ಹೊಂದಿದ್ದು, ಶಿಕ್ಷಕರು ಶಾಲೆಯಿಂದ ಹೊರಡುವಾಗ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದು, ಮನಕಲಕುವಂತಿತ್ತು.

eacher transfer
ನೆಚ್ಚಿನ ಶಿಕ್ಷಕ ವರ್ಗ

By

Published : Dec 14, 2021, 6:12 PM IST

Updated : Dec 15, 2021, 12:11 PM IST

ಬಾಗಲಕೋಟೆ:ಬಾದಾಮಿ ತಾಲೂಕಿನ ಅನವಾಲ ಗ್ರಾಮದ ಶಿಕ್ಷಕರೊಬ್ಬರು ಬೇರೆ ಗ್ರಾಮಕ್ಕೆ ವರ್ಗಾವಣೆ ಹೊಂದಿದ್ದು, ಶಿಕ್ಷಕರು ಶಾಲೆಯಿಂದ ಹೊರಡುವಾಗ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದು ಮನಕಲಕುವಂತಿತ್ತು.

ನೆಚ್ಚಿನ ಶಿಕ್ಷಕರ ಬೀಳ್ಕೊಡುಗೆ

ತಾಲೂಕಿನ ಅನವಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಲ್‌.ಎಸ್. ಬೀಳಗಿ ಎಂಬುವವರು ಸಮಾಜ ವಿಜ್ಞಾನ ವಿಷಯ ಶಿಕ್ಷಕರಾಗಿದ್ದರು. ಇವರು ಇದೀಗ ಸೀಮಿಕೇರಿಗೆ ವರ್ಗಾವಣೆ ಆಗಿದ್ದಾರೆ. ಕಳೆದ 15 ವರ್ಷದಿಂದ ಅನವಾಲದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ನ ಒಗ್ಗಟ್ಟಿನ ಹೋರಾಟದ ಫಲವಾಗಿ ಈ ಫಲಿತಾಂಶ ಬಂದಿದೆ.. ಡಿ ಕೆ ಶಿವಕುಮಾರ್​

ನೆಚ್ಚಿನ ಶಿಕ್ಷಕ ವರ್ಗಾವಣೆಯಾದ ನೋವು ಅರಗಿಸಿಕೊಳ್ಳದ ವಿದ್ಯಾರ್ಥಿಗಳು ಗಳಗಳನೆ ಅತ್ತಿದ್ದಾರೆ. ಅಲ್ಲದೇ ಕಾಲಿಗೆ ನಮಸ್ಕರಿಸಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ಮಕ್ಕಳ ಪ್ರೀತಿ ಕಂಡು ಶಿಕ್ಷಕರೂ ಸಹ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

Last Updated : Dec 15, 2021, 12:11 PM IST

ABOUT THE AUTHOR

...view details