ಬಾಗಲಕೋಟೆ: ಕೆ.ಜಿ.ಹಳ್ಳಿ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿ ಆಸ್ತಿಹಾನಿ ಮಾಡಲಾಗಿದೆ. ಈ ಘಟನೆಯನ್ನು ಖಂಡಿಸಿ ಇಲಕಲ್ ಪಟ್ಟಣದಲ್ಲಿ ಸಿದ್ದರಾಮೇಶ್ವರ ಭೋವಿ(ವಡ್ಡರ್) ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿಗೆ ಖಂಡನೆ: ಭೋವಿ ಸಮಾಜದಿಂದ ಪ್ರತಿಭಟನೆ - ಸಿದ್ದರಾಮೇಶ್ವರ ಭೋವಿ ಸಮಾಜ
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಖಂಡಿಸಿ ಬಾಗಲಕೋಟೆಯ ಇಲಕಲ್ ಪಟ್ಟಣದಲ್ಲಿ ಸಿದ್ದರಾಮೇಶ್ವರ ಭೋವಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭೋವಿ ಸಮಾಜದಿಂದ ಪ್ರತಿಭಟನೆ
ಇಲಕಲ್ ಪಟ್ಟಣದ ಕಂಠಿ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಅವರು, ಕೃತ್ಯ ಎಸಗಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಬಳಿಕ ತಮ್ಮ ವಿವಿಧ ಬೇಡಿಕೆ ಇರುವ ಮನವಿ ಪತ್ರವನ್ನು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖ್ಯಸ್ಥರು, ನಗರ ಸಭೆ ಸದಸ್ಯರು ಭಾಗಿಯಾಗಿದ್ದರು.