ಕರ್ನಾಟಕ

karnataka

ETV Bharat / state

ವಾಟ್ಸಾಪ್​​​ಗೆ ಯುವತಿಯ ಅಶ್ಲೀಲ ವಿಡಿಯೋ ಹಾಕಿದ್ದ ಆರೋಪ: ಅನ್ಯಕೋಮಿನ ಯುವಕ ಅರೆಸ್ಟ್​ - ಬಾದಾಮಿ ತಾಲೂಕಿನ ಮುಷ್ಟಿಗೇರಿ

ಯುವತಿಯ ಅಶ್ಲೀಲ ವಿಡಿಯೋ ವಾಟ್ಸಾಪ್​​​ ಸ್ಟೇಟಸ್​​ನಲ್ಲಿ ಹಾಕಿಕೊಂಡಿದ್ದ ಎಂಬ ಆರೋಪದಡಿ ಯುವಕನೋರ್ವನನ್ನು ಬಂಧಿಸಲಾಗಿದೆ. ಇದಕ್ಕೂ ಮೊದಲು ಮುಷ್ಟಿಗೇರಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತಲ್ಲದೆ, ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

A boy arrested for uploaded obscene video
ಮುಷ್ಟಿಗೇರಿ ಗ್ರಾಮ

By

Published : Aug 3, 2021, 3:19 PM IST

ಬಾಗಲಕೋಟೆ:ವಾಟ್ಸಾಪ್​ನಲ್ಲಿ ಯುವತಿಯೋರ್ವಳ ಅಶ್ಲೀಲ ವಿಡಿಯೋ ಹಾಕಿದ್ದ ಆರೋಪದಡಿ ಯುವಕನನ್ನು ಬಂಧಿಸಬೇಕು ಎಂದು ಹಿಂದೂ ಪರ ಸಂಘಟನೆಯ ಯುವಕರು ಆಗ್ರಹಿಸಿ ಪ್ರಾರ್ಥನಾ ಸ್ಥಳಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವ ಘಟನೆ ಇಲ್ಲಿನ ಮುಷ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದ ಯುವಕನೋರ್ವ ಯುವತಿಯೋರ್ವಳ ಅಶ್ಲೀಲ ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್​​ನಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗ್ತಿದೆ. ಇದರಿಂದ ಆಕ್ರೋಶಗೊಂಡ ಯುವಕರ ಪ್ರಾರ್ಥನಾ ಸ್ಥಳಕ್ಕೆ ಬೀಗ ಜಡಿದು ಯುವಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಬಳಿಕ ಸ್ಥಳಕ್ಕಾಗಮಿಸಿದ ಕೆರೂರ ಪೊಲೀಸರು ಸ್ಥಳದಲ್ಲಿದ್ದವರನ್ನು ಅಲ್ಲಿಂದ ಹಿಂದಕ್ಕೆ ಕಳುಹಿಸಿದ್ದಾರೆ. ಜೊತೆಗೆ ವಿಡಿಯೋ ಹಾಕಿದ್ದಾನೆ ಎನ್ನಲಾಗಿದ್ದ ಯುವಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಓದಿ:ಅತ್ಯಾಚಾರದಿಂದ ಗರ್ಭಿಣಿಯಾದ ಅಪ್ರಾಪ್ತೆ, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲು: ಭ್ರೂಣ ಸಾವು

ABOUT THE AUTHOR

...view details