ಬಾಗಲಕೋಟೆ: ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ 8 ದೇವಸ್ಥಾನಗಳು ಹಾಗೂ ಒಂದು ಮಸೀದಿ ಸೇರಿದಂತೆ, ಒಟ್ಟು 9 ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲಾಯಿತು. ಸೋಮವಾರ ಪೇಟೆಯ ಮಸೀದಿ ಸೇರಿದಂತೆ ಕೆಲ ದೇವಸ್ಥಾನಗಳನ್ನು ನೆಲಸಮಗೊಳಿಸಲಾಯಿತು. ಸರ್ವೋಚ್ಛ ನ್ಯಾಯಲಯದ ಆದೇಶದಂತೆ ಕ್ರಮ ಜರುಗಿಸುತ್ತಿರುವ ನಗರಸಭೆ, ಕಂದಾಯ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ 8 ದೇವಸ್ಥಾನಗಳು ಹಾಗೂ 1 ಮಸೀದಿ ಸೆಲಸಮ - 8 temple demolation in rabakavi
ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ 8 ದೇವಸ್ಥಾನಗಳು ಹಾಗೂ ಒಂದು ಮಸೀದಿ ಸೇರಿದಂತೆ, ಒಟ್ಟು 9 ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲಾಯಿತು.
8 ದೇವಸ್ಥಾನಗಳು ಹಾಗೂ 1 ಮಸೀದಿ ಸೆಲಸಮ
ಇನ್ನುಇದಕ್ಕೆ ಸಂಬಂಧಿಸಿದಂತೆ ಪರ್ಯಾಯ ಜಾಗೆ ಕಲ್ಪಿಸಿಕೊಡುವಂತೆ ಕೆಲ ಜನರು ಒತ್ತಾಯಿಸಿದ್ದು, ಇದಕ್ಕೆ ಪೂರಕವಾಗಿ ಅಧಿಕಾರಿಗಳು ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ಶತಮಾನದಿಂದಲೂ ಆಚರಣೆ ಮಾಡುತ್ತಿರುವ ಹಬ್ಬಗಳಿಗೆ ಚ್ಯುತಿ ಬರದಂತೆ ಅಧಿಕಾರಿಗಳು ಸೂಕ್ತ ಸ್ಥಳಾವಕಾಶ ಕಲ್ಪಿಸಿದ್ದಲ್ಲಿ ಅನುಕೂಲವಾಗುವದೆಂದು ಸಾರ್ವಜನಿಕರು ಒತ್ತಾಸೆಯಾಗಿದೆ.