ಬಾಗಲಕೋಟೆ:ಜಿಲ್ಲೆಯಲ್ಲಿ ಮತ್ತೆ 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ಬಾದಾಮಿಯಲ್ಲಿ 3, ಬನಹಟ್ಟಿ, ಗುಳೇದಗುಡ್ಡ, ಮುಧೋಳನಲ್ಲಿ ತಲಾ ಒಂದು ಪ್ರಕರಣಗಳು ಪತ್ತೆ ಆಗಿದೆ.
ಮಹಾರಾಷ್ಟ್ರದಿಂದ ಬಂದಿದ್ದ ಬನಹಟ್ಟಿಯ ಲಕ್ಷ್ಮೀ ನಗರದ 57 ವರ್ಷದ ಮಹಿಳೆ ಪಿ-9151, ದೆಹಲಿಯಿಂದ ಬಂದಿದ್ದ ಗುಳೇದಗುಡ್ಡದ ಟೀಚರ್ ಕಾಲೋನಿಯ 27 ವರ್ಷದ ಯುವಕ ಪಿ-9152, ನವನಗರದ ಸೆಕ್ಟರ್ ನಂ.36ರ ಸಂಪರ್ಕ ಹೊಂದಿದ್ದ ಬಾದಾಮಿ ಮಂಜುನಾಥ ನಗರದ 54 ವರ್ಷದ ಮಹಿಳೆ ಪಿ-9153.
ಇನ್ನು 24 ವರ್ಷದ ಯುವತಿ ಪಿ-9153, 25 ವರ್ಷದ ಯುವಕ ಪಿ-9154, ಉತ್ತರ ಪ್ರದೇಶದಿಂದ ಬಂದಿದ್ದ ಮುಧೋಳ ತಾಲೂಕಿನ ಕುಳ್ಳೊಳ್ಳಿ ಗ್ರಾಮದ 30 ವರ್ಷದ ಮಹಿಳೆಗೆ ಪಿ-9155 ಸೋಂಕು ದೃಡಪಟ್ಟಿದೆ.
ಸೋಂಕು ದೃಢಪಟ್ಟವರನ್ನು ಈ ಹಿಂದೆ ಕ್ವಾರಂಟೈನ್ ಮಾಡಲಾಗಿತ್ತು. ಕೋವಿಡ್ ದೃಢಪಟ್ಟವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್ ನಿಯಮ ಉಲ್ಲಂಘನೆ:ಬಾಗಲಕೋಟೆ ನಗರದ ವಾರ್ಡ್ ನಂ.10ರ ರೈಲ್ವೆ ನಿಲ್ದಾಣದ ಹತ್ತಿರ ಅಂಚೆ ಕಛೇರಿ ಹಿಂಭಾಗದಲ್ಲಿ ಜೂನ್ 12 ರಂದು ವಿವಾಹ ಕಾರ್ಯಕ್ರಮ ಜರುಗಿಸಲು ಷರತ್ತಿಗೆ ಒಳಪಟ್ಟು ನಗರಸಭೆಯಿಂದ ಅನುಮತಿ ನೀಡಲಾಗಿತ್ತು. ವಿವಾಹ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ.
ಸದರಿ ಸ್ಥಳದಲ್ಲಿ ನಡೆದ ವರನಿಗೆ ಕೋವಿಡ್ ದೃಢಪಟ್ಟಿದೆ. ವಿವಾಹ ಸಂದರ್ಭದಲ್ಲಿ ತಪಾಸಣೆಗೆ ತೆರಳಿದಾಗ 50 ಜನ ಮಾತ್ರ ಇದ್ದದ್ದು ಕಂಡುಬಂದಿತು. ಅವರೆಲ್ಲರ ಹೆಸರು ಮತ್ತು ಮೊ.ನಂ ಪಡೆಯಲಾಗಿತ್ತು. ತದನಂತರ 50ಕ್ಕೂ ಹೆಚ್ಚು ಜನ ಇದ್ದ ಬಗ್ಗೆ ಮದುವೆ ಸಮಾರಂಭದ ಸಿಡಿಯಿಂದ ತಿಳಿದುಬಂದಿದೆ.
ಆದ್ದರಿಂದ ನಗರದಲ್ಲಿ ಕೋವಿಡ್ ಹರಡಲು ಕಾರಣರಾದ ಎಮ್.ಎಸ್.ಸೌದಾಗರ ಅವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅನ್ವಯ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವುದಾಗಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.