ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಕೊರೊನಾ ಗೆದ್ದ ನಾಲ್ವರು ಮನೆಗೆ: ಹೂವಿನ ಸಸಿ ನೀಡಿ ಬೀಳ್ಕೊಟ್ಟ ವೈದ್ಯರು - ಬಾಗಲಕೋಟೆ ಜಿಲ್ಲಾಸ್ಪತ್ರೆ

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಹಿನ್ನೆಲೆ, ಓರ್ವ ಮಹಿಳೆ, ಇಬ್ಬರು ಮಕ್ಕಳು ಹಾಗೂ ಓರ್ವ ಪುರುಷನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜಿಲ್ಲೆಯಲ್ಲಿ ಮತ್ತೆ 33 ಸ್ಯಾಂಪಲ್​​ಗಳ ವರದಿ ನೆಗಟಿವ್ ಬಂದಿದೆ. ಬಾಕಿ 27 ಮತ್ತು 100 ಹೊಸ ಸ್ಯಾಂಪಲ್​ಗಳು ಸೇರಿ ಒಟ್ಟು 127 ಸ್ಯಾಂಪಲ್​ಗಳ ವರದಿ ನಿರೀಕ್ಷೆಯಲ್ಲಿ ಇವೆ. ಮನೆಯಲ್ಲಿಯೇ ಪ್ರತ್ಯೇಕವಾಗಿ 1,545 ಜನರ ಮೇಲೆ ನಿಗಾ ಇಡಲಾಗಿದೆ.

4 more Patients discharged from bagalkot from covid-19
ಬಾಗಲಕೋಟೆಯಲ್ಲಿ ಕೊರೊನಾ ಗೆದ್ದ ನಾಲ್ವರು ಮನೆಗೆ: ವೈದ್ಯರಿಂದ ಹೂವಿನ ಸಸಿ ನೀಡಿ ಬೀಲ್ಕೊಡುಗೆ

By

Published : Apr 25, 2020, 11:46 PM IST

ಬಾಗಲಕೋಟೆ:ರೆಡ್​​ ಜೋನ್​ನಲ್ಲಿದ್ದ ಬಾಗಲಕೋಟೆಯಲ್ಲಿ ಕೊರೊನಾ ವೈರಸ್ ಸೋಂಕಿತ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ‌ ಬಿಡುಗಡೆಗೊಂಡಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಹಿನ್ನೆಲೆ, ಓರ್ವ ಮಹಿಳೆ, ಇಬ್ಬರು ಮಕ್ಕಳು ಹಾಗೂ ಓರ್ವ ಪುರುಷನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್, ಜಿಲ್ಲಾ ಸರ್ಜನ್ ಡಾ.ಪ್ರಕಾಶ ಬಿರಾದಾರ, ಡಾ.ಜವಳಿ ಹಾಗೂ ಸಿಬ್ಬಂದಿ ಸೇರಿಕೊಂಡು ಚಪ್ಪಾಳೆ ತಟ್ಟಿ ಹೂವಿನ ಸಸಿಯನ್ನು ನೀಡಿ ಬೀಳ್ಕೊಟ್ಟರು. ಗುಣಮುಖರಾಗಿರುವುದಕ್ಕೆ ಮನೆಯಲ್ಲಿ ಈ ಸಸಿಯನ್ನು ನೆಟ್ಟು ಪೋಷಿಸುವಂತೆ ಡಾ.ಪ್ರಕಾಶ ಬಿರದಾರ ತಿಳಿಸಿದರು. ಇದೇ ಸಮಯದಲ್ಲಿ ನಾಲ್ಕು ವರ್ಷದ ಪುಟ್ಟ ಮಗುವಿಗೆ ಗಿಫ್ಟ್ ನೀಡಿದರು. ಈ ಸಂದರ್ಭದಲ್ಲಿ ಗುಣಮುಖರಾದವರು ತಮ್ಮ ಅಭಿಪ್ರಾಯ ತಿಳಿಸಿ, ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ನೋಡಿಕೊಂಡಿದ್ದಾರೆ.

ಬೆಚ್ಚಗಿನ ನೀರು, ಲಿಂಬೆ ಹಣ್ಣು, ಊಟ ಉಪಾಹಾರ ನೀಡಿ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. 33 ವರ್ಷದ ಪುರುಷ ಪಿ-164, 26 ವರ್ಷದ ಮಹಿಳೆ ಪಿ-165, 4 ವರ್ಷದ ಬಾಲಕ ಪಿ-186, 13 ವರ್ಷದ ಬಾಲಕ ಪಿ-187 ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಸಂಜೆ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೆ ಒಟ್ಟು 6 ಜನ ಕೋವಿಡ್​​ನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಸಂತಸ ಮೂಡಿಸಿದೆ.

ಜಿಲ್ಲೆಯಲ್ಲಿ ಮತ್ತೆ 33 ಸ್ಯಾಂಪಲ್​​ಗಳ ವರದಿ ನೆಗಟಿವ್ ಬಂದಿದೆ. ಬಾಕಿ 27 ಮತ್ತು 100 ಹೊಸ ಸ್ಯಾಂಪಲ್​ಗಳು ಸೇರಿ ಒಟ್ಟು 127 ಸ್ಯಾಂಪಲ್​ಗಳ ವರದಿ ನಿರೀಕ್ಷೆಯಲ್ಲಿ ಇವೆ. ಮನೆಯಲ್ಲಿ ಪ್ರತ್ಯೇಕವಾಗಿ 1,545 ಜನರ ಮೇಲೆ ನಿಗಾ ಇಡಲಾಗಿದೆ.

ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 1,713 ಇದ್ದು, ನೆಗಟಿವ್ ಪ್ರಕರಣ 1,556, ಪಾಸಿಟಿವ್ ಪ್ರಕರಣ 24, ಜಿಲ್ಲೆಯಲ್ಲಿ ಕೋವಿಡ್​​​ನಿಂದ ಒಂದು ಸಾವಾಗಿದೆ. ಈಗ ಇಲ್ಲಿಯವರೆಗೆ ಒಟ್ಟು ಆರು ಜನ ಕೋವಿಡ ರೋಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು 17 ಜನರು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ABOUT THE AUTHOR

...view details