ಕರ್ನಾಟಕ

karnataka

ETV Bharat / state

ಬನಹಟ್ಟಿ ಶ್ರೀಕಾಡಸಿದ್ಧೇಶ್ವರ ಜಾತ್ರೆಯಲ್ಲಿ ಭಕ್ತರಿಗಾಗಿ 30 ಸಾವಿರ ಇಡ್ಲಿ,, 3 ಕ್ವಿಂಟಲ್ ಜಿಲೇಬಿ ವಿತರಣೆ.. - ಬಾಗಲಕೋಟೆ

ಲಕ್ಷಾಂತರ ರೂ.ಗಳಷ್ಟು ಮದ್ದು ಸುಡುವ ಉತ್ತರ ಕರ್ನಾಟಕದ ಏಕೈಕ ಜಾತ್ರೆಯಾದ ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ಧೇಶ್ವರ ಜಾತ್ರೆಯ ನಿಮಿತ್ತ ಇಂದು ಮಂಗಳವಾರ ಆಗಮಿಸುವ ಭಕ್ತರಿಗಾಗಿ ಸ್ಥಳೀಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಗಿನ ಜಾವದಿಂದ 30 ಸಾವಿರ ಇಡ್ಲಿ ಹಾಗೂ 3 ಕ್ವಿಂಟಲ್ ಜಿಲೇಬಿ ಸಿಹಿ ತಯಾರಿಸಿ ಉಣ ಬಡಿಸುವಲ್ಲಿ ಯಶಸ್ವಿಯಾದರು.

30 ಸಾವಿರ ಇಡ್ಲಿ

By

Published : Sep 18, 2019, 10:17 AM IST

ಬಾಗಲಕೋಟೆ:ಲಕ್ಷಾಂತರ ರೂ.ಗಳಷ್ಟು ಮದ್ದು ಸುಡುವ ಉತ್ತರ ಕರ್ನಾಟಕದಏಕೈಕ ಜಾತ್ರೆಯಾದ ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀಕಾಡಸಿದ್ಧೇಶ್ವರ ಜಾತ್ರೆಯ ನಿಮಿತ್ತ ಇಂದು ಮಂಗಳವಾರ ಆಗಮಿಸುವ ಭಕ್ತರಿಗಾಗಿ ಸ್ಥಳೀಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಗಿನ ಜಾವದಿಂದ 30 ಸಾವಿರ ಇಡ್ಲಿ ಹಾಗೂ 3 ಕ್ವಿಂಟಲ್ ಜಿಲೇಬಿ ಸಿಹಿ ತಯಾರಿಸಿ ಉಣ ಬಡಿಸುವಲ್ಲಿ ಯಶಸ್ವಿಯಾದರು.

ಸುಮಾರು 50 ಜನರ ತಂಡದೊಂದಿಗೆ ಸುಮಾರು 5 ಕ್ವಿಂಟಲ್‍ನಷ್ಟು ಅಕ್ಕಿಯಿಂದ ಇಡ್ಲಿ ತಯಾರಿಸಲಾಗಿತ್ತು. ಅಲ್ಲದೆ ಅನೇಕ ಭಕ್ತರು ಮಸಾಲೆ ಅನ್ನ, ಉಪ್ಪಿಟ್ಟು, ಶಿರಾ ಸೇರಿ ಮಧ್ಯರಾತ್ರಿ 12 ಗಂಟೆಯಿಂದ ದೀಡ ನಮಸ್ಕಾರ ಹಾಕುವ ಭಕ್ತರಿಂದ ರಥೋತ್ಸವಕ್ಕೆ ಆಗಮಿಸುವ ಭಕ್ತರವರೆಗೂ ಪ್ರಸಾದ ಹಂಚಲಾಯಿತು.ಇಡ್ಲಿ, ಸಾಂಬಾರು ಹಾಗೂ ಜಿಲೇಬಿ ಸಿಹಿ ತಯಾರಿಸಿ ಭಕ್ತರಿಗೆ ಹಂಚುವುದರ ಮೂಲಕ ಭಕ್ತರ ಮನ ತಣಿಸುವಲ್ಲಿ ಕಾರಣರಾದರು. ಇಡ್ಲಿ ಸಾಂಬಾರು ಸವಿಯಬೇಕಾದರೆ ಬನಹಟ್ಟಿ ಜಾತ್ರೆಗೆ ಆಗಮಿಸಬೇಕೆನ್ನುವಷ್ಟು ರುಚಿಕರವಾಗಿದ್ದವು ಇಡ್ಲಿ ಮತ್ತು ಜಿಲೇಬಿ..

ABOUT THE AUTHOR

...view details