ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ 80 ವರ್ಷದ ಅಜ್ಜಿ ಸೇರಿ ಮೂವರು ಕೊರೊನಾದಿಂದ ಗುಣಮುಖ : ಡಿಸ್ಚಾರ್ಜ್​ - latest corona news in bagalkot

ಮೂವರ ಸೋಂಕಿತರ ಪೈಕಿ 80 ವರ್ಷದ ಅಜ್ಜಿಯೊಬ್ಬರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಜ್ಜಿಗೆ ವೈದ್ಯರು, ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

3 more corona patient discharge
80 ವರ್ಷದ ಅಜ್ಜಿ ಸೇರಿ ಮೂವರು ಕೊರೊನಾದಿಂದ ಗುಣಮುಖ

By

Published : May 30, 2020, 6:08 PM IST

ಬಾಗಲಕೋಟೆ :ಜಿಲ್ಲೆಯಲ್ಲಿ80 ವರ್ಷದ ಅಜ್ಜಿ ಸೇರಿದಂತೆಮೂವರು ಮಾರಕ ಕೊರೊನಾದಿಂದ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಯಿತು.

ಬಿಡುಗಡೆಯಾದವರ ಪೈಕಿ ಈ 80ರ ಅಜ್ಜಿ ಗಮನ ಸೆಳೆದರು. ಅಜ್ಜಿಗೆ ವೈದ್ಯರು, ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 66 ಕ್ಕೆ ಏರಿಕೆಯಾಗಿದೆ. ಇನ್ನೂ 10 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಡಾಣಕಶಿರೂರ ಗ್ರಾಮದ 80 ವರ್ಷದ ವೃದ್ದೆ, ಮುಧೋಳದ 19 ವರ್ಷದ ಯುವಕ, ಕುಳಗೇರಿ ಕ್ರಾಸ್​ನ 33 ವರ್ಷದ ಪುರುಷ ಗುಣಮುಖರಾಗಿ ಬಿಡುಗಡೆಯಾದವರು.

80 ವರ್ಷದ ಅಜ್ಜಿ ಸೇರಿ ಮೂವರು ಕೊರೊನಾದಿಂದ ಗುಣಮುಖ

ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಪ್ರಮಾಣಪತ್ರ ವಿತರಣೆ ಮಾಡಿದರು. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 1225 ಸ್ಯಾಂಪಲ್​ಗಳ ಪೈಕಿ 619 ಸ್ಯಾಂಪಲ್​ಗಳ ವರದಿ ನೆಗಟಿವ್ ಬಂದಿದೆ. 1033 ಜನರ ವರದಿಯ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ.

ABOUT THE AUTHOR

...view details