ಬಾಗಲಕೋಟೆ:ಜಿಲ್ಲೆಯಲ್ಲಿ ಇಂದು ಹೊಸದಾಗಿ 27 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಸೋಂಕಿತರ ಸಂಖ್ಯೆ 1,293ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ: 27 ಕೊರೊನಾ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 1,293ಕ್ಕೆ ಏರಿಕೆ - Bagalkot District News
ಬಾಗಲಕೋಟೆ ಜಿಲ್ಲೆಯಲ್ಲಿಂದು 27 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,293ಕ್ಕೆ ಏರಿಕೆಯಾಗಿದೆ. ಈವರೆಗೂ 40 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಬಾಗಲಕೋಟೆ ನಗರ
ಜಮಖಂಡಿ ತಾಲೂಕಿನಲ್ಲಿ 15, ಬಾಗಲಕೋಟೆ 4, ಬಾದಾಮಿ, ಹುನಗುಂದ ತಲಾ 2, ಮುಧೋಳ 1 ಹಾಗೂ ಬೇರೆ ಜಿಲ್ಲೆಯ 3 ಪ್ರಕರಣಗಳು ಪತ್ತೆಯಾಗಿವೆ. ಸೋಂಕು ದೃಢಪಟ್ಟವರ ಪೈಕಿ 13 ಕೆಮ್ಮು, ನೆಗಡಿ ಜ್ವರ ಹಾಗೂ 2 ತೀವ್ರ ಉಸಿರಾಟದ ಲಕ್ಷಣದಿಂದ ಕೂಡಿವೆ.
ಇಲ್ಲಿಯವರೆಗೆ 40 ಜನರು ಸೋಂಕಿನಿಂದ ಮೃತಪಟ್ಟಿರುವ ವರದಿಯಾಗಿದೆ. ಈವರೆಗೂ 741 ಮಂದಿ ಗುಣಮುಖರಾಗಿದ್ದು, 512 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಿಂದ ಕಳುಹಿಸಿರುವ 605 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.