ಕರ್ನಾಟಕ

karnataka

ETV Bharat / state

ಇಂದಿನಿಂದ ಜಿಲ್ಲಾದ್ಯಂತ 2 ತಿಂಗಳ ಪಡಿತರ ವಿತರಣೆ : ಡಿಸಿ - ಪಡಿತರ ವಿತರಣೆ

ಜಿಲ್ಲೆಯಲ್ಲಿರುವ ಒಟ್ಟು 700 ನ್ಯಾಯಬೆಲೆ ಅಂಗಡಿಗಳ ಮೂಲಕ 46,266 ಅಂತ್ಯೋದಯ, 3,66,300 ಬಿಪಿಎಲ್ ಹಾಗೂ 25,044 ಎಪಿಎಲ್ ಚೀಟಿದಾರರಿಗೆ ಪಡಿತರಧಾನ್ಯವನ್ನು ವಿತರಿಸಲಾಗುತ್ತಿದೆ.

ಪಡಿತರ ವಿತರಣೆ
ಪಡಿತರ ವಿತರಣೆ

By

Published : Mar 31, 2020, 8:23 PM IST

ಬಾಗಲಕೋಟೆ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪಡಿತರ ಚೀಟಿದಾರರಿಗೆ ಏಪ್ರಿಲ್ & ಮೇ ಮಾಹೆಯ 2 ತಿಂಗಳ ಪಡಿತರ ಧಾನ್ಯವನ್ನು ಏಪ್ರಿಲ್ 1 ರಿಂದ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಒಟ್ಟು 700 ನ್ಯಾಯಬೆಲೆ ಅಂಗಡಿಗಳ ಮೂಲಕ 46,266 ಅಂತ್ಯೋದಯ, 3,66,300 ಬಿಪಿಎಲ್ ಹಾಗೂ 25,044 ಎಪಿಎಲ್ ಚೀಟಿದಾರರಿಗೆ ಪಡಿತರಧಾನ್ಯವನ್ನು ವಿತರಿಸಲಾಗುತ್ತಿದೆ. ಏಪ್ರಿಲ್ ಮತ್ತು ಮೇ ಮಾಹೆಯ 2 ತಿಂಗಳುಗಳ ಪಡಿತರವನ್ನು ಏಪ್ರಿಲ್ 1 ರಿಂದ ತಿಂಗಳ ಅಂತ್ಯದ ವರೆಗೆ ಬೆ.7 ರಿಂದ ರಾತ್ರಿ 9 ಗಂಟೆವರೆಗೆ ವಿತರಿಸಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಕಾರರಿಗೆ ಆಹಾರ ಇಲಾಖೆಯಿಂದ ಗುರುತಿನ ಚೀಟಿಯನ್ನು ನೀಡಲಾಗಿದ್ದು, ನಿತ್ಯ ಬೆ.7 ರಿಂದ ರಾತ್ರಿ 9 ಗಂಟೆವರೆಗೆ ವಿತರಿಸಬೇಕು. ವಿತರಣೆಗೆ ಅಗತ್ಯವಿರುವ ಸೂಕ್ತ ಸ್ಥಳಾವಕಾಶ ಮತ್ತು ಸುಚಿತ್ವ ಕಾಪಾಡಿಕೊಳ್ಳತಕ್ಕದ್ದು. ನ್ಯಾಯಬೆಲೆ ಅಂಗಡಿಕಾರರು ಮಾಸ್ಕ್ ಅಥವಾ ಕರವಸ್ತ್ರ ಹಾಗೂ ಹ್ಯಾಂಡ್ ಸ್ಯಾನಿಟೈಜರ್ ಕಡ್ಡಾಯವಾಗಿ ಬಳಸತಕ್ಕದ್ದು. ಪಡಿತರ ಚೀಟಿಯಲ್ಲಿರುವ ಒಬ್ಬ ಸದಸ್ಯರು ಮಾತ್ರ ಬಂದು ಪಡಿತರ ಪಡೆದುಕೊಳ್ಳಬೇಕು. ನಿತ್ಯ 50 ರಿಂದ 70 ಪಡಿತರ ಚೀಟಿದಾರರನ್ನು ಮಾತ್ರ ಕರೆಯಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಂಗಡಿ ಮುಂದೆ ಚೌಕ್ ಬಾಕ್ಸ ಹಾಕಿ ನಿಲ್ಲಿಸಿ ವಿತರಿಸಬೇಕು.

ಈ ಮಾಹೆಯ ಪಡಿತರ ವಿತರಣೆಯಲ್ಲಿ ಬೆರಳಚ್ಚು ಕಡ್ಡಾಯ ಇರುವುದಿಲ್ಲ. ಪ್ರತಿ ಪಡಿತರ ಚೀಟಿದಾರರು ಕಡ್ಡಾಯವಾಗಿ ಪಡಿತರ ಚೀಟಿಯೊಂದಿಗೆ ಮೊಬೈಲ್ ತೆಗೆದುಕೊಂಡು ಬಂದು ಮೊಬೈಲ್ ಸಂಖ್ಯೆ ನೀಡಿ ತಂತ್ರಾಂಶದಿಂದ ಬಂದ ಓಟಿಪಿಯನ್ನು ಅಂಗಡಿಕಾರರಿಗೆ ನೀಡಿ ಪಡಿತರ ಪಡೆಯಬಹುದಾಗಿದೆ. ಪಡಿತರದಾರರು ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ್ತ್ರ ಧರಿಸಿ ಪಡಿತರ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details