ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕು ವರದಿಯಾಗಿಲ್ಲ. ಇದರ ಜೊತೆಗೆ 17 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಢಾಣಕಶಿರೂರ ಗ್ರಾಮದ 19 ವರ್ಷದ ಯುವತಿ ಪಿ-704, ಜಮಖಂಡಿಯ 17 ವರ್ಷದ ಬಾಲಕ ಪಿ-894, 22 ವರ್ಷದ ಯುವಕ ಪಿ-893, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸರಿತ್ತಿ ಗ್ರಾಮದ 32 ವರ್ಷದ ಪಿ-892 ಗುಣಮುಖರಾದವರು.
ಬಾಗಲಕೋಟೆಯಲ್ಲಿ ಕೊರೊನಾ ಗೆದ್ದ 17 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮುಧೋಳದ ಓರ್ವ ಸೇರಿದಂತೆ ಒಟ್ಟು 13 ಜನರಿಗೆ ತಬ್ಲಿಘಿ ಜಮಾತ್ನಿಂದ ಬಂದವರಿಂದ ಸೋಂಕು ತಗಲಿದ್ದು, ಈಗ ಎಲ್ಲರೂ ಗುಣಮುಖರಾಗಿದ್ದಾರೆ.
ಪಿ-870, ಪಿ-871, ಪಿ-872, ಪಿ-873, ಪಿ-874, ಪಿ-875, ಪಿ-876, ಪಿ-893, ಪಿ-894, ಪಿ-895, ಪಿ-896, ಪಿ-897, ಪಿ-899 ಇವರು ಕೊರೊನಾದಿಂದ ಮುಕ್ತಿ ಪಡೆದಿದ್ದಾರೆ. ಸೋಂಕಿನಿಂದ ಗುಣಮುಖರಾದವರಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಪ್ರಮಾಣ ಪತ್ರ ವಿತರಣೆ ಮಾಡಿ, 14 ದಿನ ಮನೆಯಲ್ಲಿ ಇರಬೇಕು. ಹೂರಗೆ ಸಂಚಾರ ಮಾಡದಂತೆ ಸೂಚನೆ ನೀಡಿದರು.
ಬಿಡುಗಡೆಯಾದ ರೋಗಿಗಳಿಗೆ ಜಿಲ್ಲಾ ಸರ್ಜನ್ ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸಗಳು ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.