ಬಾಗಲಕೋಟೆ: ಜಿಲ್ಲೆಯಲ್ಲಿಂದು 153 ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 5,488ಕ್ಕೆ ಏರಿಕೆಯಾಗಿದೆ.
95 ಜನರು ಗುಣಮುಖರಾಗಿ ಇಂದು ನಿಗದಿತ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ಗಳಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 5,488 ಸೋಂಕಿತರ ಪೈಕಿ ಈವರೆಗೆ 4,593 ಜನರು ಕೋವಿಡ್‍ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
ಜಿಲ್ಲೆಯಿಂದ ಈವರೆಗೆ ಒಟ್ಟು 52,679 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 46,099 ನೆಗಟಿವ್ ಪ್ರಕರಣ, 5,488 ಪಾಸಿಟಿವ್ ಪ್ರಕರಣ ಹಾಗು 66 ಮೃತ ಪ್ರಕರಣ ವರದಿಯಾಗಿರುತ್ತದೆ. 210 ಸ್ಯಾಂಪಲ್‍ಗಳು ರಿಜೆಕ್ಟ್ ಆಗಿರುತ್ತವೆ. 787 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 495 ಜನರು ನಿಗಾದಲ್ಲಿದ್ದಾರೆ.
ಸದ್ಯ 829 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಕಂಟೈನ್ಮೆಂಟ್ ಝೋನ್ 585 ಇದ್ದು, ಸಾಂಸ್ಥಿಕ ಕ್ವಾಂರಂಟೈನ್‍ನಲ್ಲಿದ್ದ 8,455 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.