ಕರ್ನಾಟಕ

karnataka

ETV Bharat / state

ಬಾಗಲಕೋಟೆ: 149 ಜನರಲ್ಲಿ ಕೋವಿಡ್ ದೃಢ, 48 ಮಂದಿ ಗುಣಮುಖ - covid positive in Bagalkote news

ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ ಬಾದಾಮಿ ತಾಲೂಕು 35, ಬಾಗಲಕೋಟೆ 48, ಬೀಳಗಿ 4, ಹುನಗುಂದ 20, ಜಮಖಂಡಿ 15, ಮುಧೋಳ 22 ಹಾಗೂ ಬೇರೆ ಜಿಲ್ಲೆಯ 5 ಪ್ರಕರಣಗಳು ಕಂಡುಬಂದಿವೆ. 614 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 666 ಜನ ನಿಗಾದಲ್ಲಿದ್ದಾರೆ.

coronavirus news ಕೊರೊನಾ ವೈರಸ್ ನ್ಯೂಸ್
coronavirus news ಕೊರೊನಾ ವೈರಸ್ ನ್ಯೂಸ್

By

Published : Aug 9, 2020, 10:08 PM IST

ಬಾಗಲಕೋಟೆ: ಜಿಲ್ಲೆಯಲ್ಲಿ 48 ಜನ ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಹೊಸದಾಗಿ 149 ಕೊರೊನಾ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,060ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 1,642 ಜನ ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ ಬಾದಾಮಿ ತಾಲೂಕು 35, ಬಾಗಲಕೋಟೆ 48, ಬೀಳಗಿ 4, ಹುನಗುಂದ 20, ಜಮಖಂಡಿ 15, ಮುಧೋಳ 22 ಹಾಗೂ ಬೇರೆ ಜಿಲ್ಲೆಯ 5 ಪ್ರಕರಣಗಳು ಕಂಡುಬಂದಿವೆ. 614 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 666 ಜನ ನಿಗಾದಲ್ಲಿದ್ದಾರೆ.

ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 35,054 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 31,102 ನೆಗೆಟಿವ್ ಪ್ರಕರಣ, 3,060 ಪಾಸಿಟಿವ್ ಪ್ರಕರಣ ವರದಿಯಾಗಿದೆ. 55 ಜನ ಮೃತಪಟ್ಟಿದ್ದಾರೆ. 1,367 ಸಕ್ರಿಯ ಪ್ರಕರಣಗಳು ಇವೆ. ಇಲ್ಲಿಯವರೆಗೆ ಒಟ್ಟು 187 ಸ್ಯಾಂಪಲ್‍ಗಳು ರಿಜೆಕ್ಟ್​ ಆಗಿದ್ದು, ಕಂಟೈನ್‌ಮೆಂಟ್ ಝೋನ್ 182, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ 8,237 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details