ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 149 ಕೊರೊನಾ ಪ್ರಕರಣಗಳು ಇಂದು ದೃಢಪಟ್ಟಿದೆ. 48 ಮಂದಿ ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
149 ಮಂದಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 3,060ಕ್ಕೆ ಏರಿಕೆಯಾಗಿದೆ. ಇಂದು ಬಾದಾಮಿ ತಾಲೂಕಿನ 35, ಬಾಗಲಕೋಟೆಯ 48, ಬೀಳಗಿಯ 4, ಹುನಗುಂದದ 20, ಜಮಖಂಡಿಯ 15, ಮುಧೋಳದ 22 ಹಾಗು ಬೇರೆ ಜಿಲ್ಲೆಯ 5 ಪ್ರಕರಣಗಳು ವರದಿಯಾಗಿದೆ. 3,060 ಸೋಂಕಿತರ ಪೈಕಿ ಒಟ್ಟು 1,642 ಸೋಂಕಿತರು ಕೋವಿಡ್‍ನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.