ಕರ್ನಾಟಕ

karnataka

ETV Bharat / state

ಬಾಗಲಕೋಟೆಯ 134 ಜನರಿಗೆ ಸೋಂಕು..101 ಮಂದಿ ಗುಣಮುಖ

134 ಮಂದಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 1813ಕ್ಕೆ ಏರಿಕೆಯಾಗಿದೆ. ಹಾಗೂ 101 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

Bagalakote corona case
Bagalakote corona case

By

Published : Aug 1, 2020, 10:56 PM IST

ಬಾಗಲಕೋಟೆ: ಹೊಸದಾಗಿ 134 ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1813ಕ್ಕೆ ಏರಿಕೆಯಾಗಿದೆ ಹಾಗೂ 101 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ

ಬಾಗಲಕೋಟೆ ತಾಲೂಕಿನಲ್ಲಿ 32, ಬಾದಾಮಿಯಲ್ಲಿ 18, ಹುನಗುಂದದಲ್ಲಿ 19, ಬೀಳಗಿಯಲ್ಲಿ 9, ಮುಧೋಳದಲ್ಲಿ 20, ಜಮಖಂಡಿಯಲ್ಲಿ 35, ಹಳೆಯ 1 ಪ್ರಕರಣ ಇಂದು ದೃಢಪಟ್ಟಿದೆ.

ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 152 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 722 ಜನ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 25255 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 23044 ನೆಗಟಿವ್ ಪ್ರಕರಣ, 1813 ಪಾಸಿಟಿವ್ ಪ್ರಕರಣ ವರದಿಯಾಗಿರುತ್ತದೆ. ಇಲ್ಲಿಯವರೆಗೆ ಒಟ್ಟು 160 ಸ್ಯಾಂಪಲ್‍ಗಳು ರಿಜೆಕ್ಟ್ ಆಗಿರುತ್ತವೆ.

101 ಮಂದಿ ಗುಣಮುಖರಾಗಿದ್ದು ಒಟ್ಟು 1009 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿ ಮನೆ ಸೇರಿದ್ದಾರೆ. ಇನ್ನೂ ಸೋಂಕಿಗೆ ತುತ್ತಾಗಿ 47 ಜನ ಮೃತಪಟ್ಟಿದ್ದಾರೆ. ಸದ್ಯ 757 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಜಿಲ್ಲೆಯಲ್ಲಿ 152 ಕಂಟೈನ್ಮೆಂಟ್ ಝೋನ್ ಗಳು ಇವೆ. ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 8237 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details