ಬಾಗಲಕೋಟೆ:ಕೊರೊನಾದಿಂದ ಮತ್ತೆ 13 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸಾರ್ಜ್ ಆಗಿದ್ದಾರೆ. ಜಮಖಂಡಿಯ ಪಿ-7028, ಬಾಗಲಕೋಟೆ ನವನಗರದ ಪಿ-7546, ಮುಧೋಳ ತಾಲೂಕಿನ ಬರಗಿ ಗ್ರಾಮದ ಪಿ-7027 ಹಾಗೂ ಪಿ-10162, ಕಲಾದಗಿ ಗ್ರಾಮದ ಪಿ-10641, ಬಾದಾಮಿ ತಾಲೂಕಿನ ಮಣಿನಾಗರ ಗ್ರಾಮದ ಪಿ-11211 ಕೋವಿಡ್ನಿಂದ ಗುಣಮುಖರಾಗಿದ್ದಾರೆ.
ಬಾಗಲಕೋಟೆಯಲ್ಲಿ 13 ಮಂದಿ ಕೊರೊನಾ ಸೋಂಕಿತರು ಗುಣಮುಖ: ಚಪ್ಪಾಳೆ ತಟ್ಟಿ ಬೀಳ್ಕೊಡುಗೆ - Corona Infection
ಬಾಗಲಕೋಟೆಯಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಈ ನಡುವೆ 13 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಜನತೆ ಕೊಂಚ ನಿರಾಳರಾಗಿದ್ದಾರೆ. ಅಲ್ಲದೆ ಕೊರೊನಾ ಜಯಿಸಿದವರನ್ನು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.
ಬಾಗಲಕೋಟೆಯಲ್ಲಿ 13 ಮಂದಿ ಕೊರೊನಾ ಸೋಂಕಿತರು ಗುಣಮುಖ...ಚಪ್ಪಾಳೆ ತಟ್ಟಿ ಬೀಳ್ಕೊಡುಗೆ
ಕಲಾದಗಿ ಗ್ರಾಮದ ಪಿ-10156, ಜಮಖಂಡಿ ತಾಲೂಕಿನ ಕುಂಚನೂರು ಗ್ರಾಮದ ಪಿ-10170, ಕಲಾದಗಿ ಗ್ರಾಮದ ಪಿ-10639, ಜಮಖಂಡಿಯ ಪಿ-10643, ಕುಂಚನೂರಿನ ಪಿ-10172, ಪಿ-10171, ಕಲಾದಗಿಯ ಪಿ-10640 ಕೋವಿಡ್ನಿಂದ ಗುಣಮುಖರಾದವರು.
ಗುಣಮುಖರಾದವರಿಗೆ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಪ್ರಮಾಣಪತ್ರ ವಿತರಿಸಿ, ಅಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.