ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಮತ್ತೆ 10 ಹೊಸ ಕೋವಿಡ್ ಪ್ರಕರಣ ದೃಢ

ಬಾಗಲಕೋಟೆಯಲ್ಲಿಂದು 10 ಕೊರೊನಾ ಪ್ರಕರಣಗಳು ವರದಿಯಾಗಿದ್ದು,ಈ ಮೂಲಕ ಸೋಂಕಿತರ ಸಂಖ್ಯೆ 218ಕ್ಕೆ ಏರಿಕೆಯಾಗಿದೆ.

ಜಿಲ್ಲಾಡಳಿತ ಭವನ
ಜಿಲ್ಲಾಡಳಿತ ಭವನ

By

Published : Jul 2, 2020, 10:36 PM IST

ಬಾಗಲಕೋಟೆ:ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೆ 10 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 218ಕ್ಕೆ ಏರಿಕೆಯಾಗಿದೆ.

ಸೋಂಕಿತ ರೋಗಿ-11411 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ನವನಗರದ ಸೆಕ್ಟರ್​ ನಂ. 58ರ 27 ವರ್ಷದ ಯುವತಿ ರೋಗಿ-16602 (ಬಿಜಿಕೆ-209), ಕೆಮ್ಮು, ನೆಗಡಿ, ಜ್ವರದ ಹಿನ್ನೆಲೆ ಬಾದಾಮಿಯ ಚಾಲುಕ್ಯ ನಗರದ 79 ವರ್ಷದ ವೃದ್ಧ ರೋಗಿ-16603 (ಬಿಜಿಕೆ-210), ಸೋಂಕಿತ ರೋಗಿ-8709 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ 16 ವರ್ಷದ ಬಾಲಕ ರೋಗಿ-16604 (ಬಿಜಿಕೆ-211), 51 ವರ್ಷದ ಪುರುಷ ರೋಗಿ-16605 (ಬಿಜಿಕೆ-212), 45 ವರ್ಷದ ಮಹಿಳೆ ರೋಗಿ-16606 (ಬಿಜಿಕೆ-213), 22 ವರ್ಷದ ಯುವಕರಾದ ರೋಗಿ-16607 (ಬಿಜಿಕೆ-214), ರೋಗಿ-16608 (ಬಿಜಿಕೆ-215) ಸೋಂಕು ಕಂಡುಬಂದಿದೆ.

ಬಾಗಲಕೋಟೆ ಕಿಲ್ಲಾ ಗಲ್ಲಿಯ 70 ವರ್ಷದ ಮಹಿಳೆ ರೋಗಿ-16609 (ಬಿಜಿಕೆ-216), ಸೋಂಕಿತ ರೋಗಿ-12066 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಮುಧೋಳದ ಜಯನಗರದ 5 ವರ್ಷದ ಬಾಲಕ ರೋಗಿ-16610 (ಬಿಜಿಕೆ-217), ರೋಗಿ-300 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಕಲಾದಗಿಯ 30 ವರ್ಷದ ಮಹಿಳೆಗೆ ರೋಗಿ-16611 (ಬಿಜಿಕೆ-218) ಸೋಂಕು ದೃಢಪಟ್ಟಿದೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 881 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 1082 ಜನರ ಮೇಲೆ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 13343 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 12161 ನೆಗೆಟಿವ್ ಪ್ರಕರಣ, 218 ಪಾಜಿಟಿವ್ ಪ್ರಕರಣ ಹಾಗೂ 5 ಜನ ಮೃತಪಟ್ಟಿದ್ದಾರೆ.

ಕೋವಿಡ್-19 ದಿಂದ ಒಟ್ಟು 123 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 90 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 21 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ್​​ ಆಗಿವೆ. ಕಂಟೈನ್ಮೆಂಟ್ ಝೋನ್ 25 ಇದ್ದು, ಇನ್‍ಸ್ಟಿಟ್ಯೂಶನ್ ಕ್ವಾರಂಟೈನ್‍ನಲ್ಲಿದ್ದ 3764 ಜನರನ್ನು ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details