ಕರ್ನಾಟಕ

karnataka

ETV Bharat / sports

21 ವರ್ಷಕ್ಕೆ ಎಟಿಪಿ ಟ್ರೋಫಿ​ ಗೆದ್ದ ಗ್ರೀಕ್​ನ ಸ್ಟೆಫನೋಸ್​​​ ಸಿಟ್ಸಿಪಾಸ್

ಸ್ಟೆಫನೋಸ್​ ಸಿಟ್ಸಿಪಾಸ್ ಎಟಿಪಿ ಫೈನಲ್​ ಪಂದ್ಯದಲ್ಲಿ ಆಸ್ಟ್ರೀಯಾದ ಡೊಮೆನಿಕ್​ ಥೀಮ್​ರನ್ನು 6-7 (6-8), 6-2, 7-6 (7-4) ರಲ್ಲಿ ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

Stefanos Tsitsipas ATP Finals title

By

Published : Nov 18, 2019, 6:43 PM IST

Updated : Nov 18, 2019, 7:29 PM IST

ಲಂಡನ್​: ಗ್ರೀಕ್​ನ 21 ವರ್ಷದ ಸ್ಟೆಫನೋಸ್​ ಸಿಟ್ಸಿಪಾಸ್​ ಎಟಿಪಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಎಟಿಪಿ ಟೂರ್ನಿ ಗೆದ್ದ ವಿಶ್ವದ 5ನೇ ಕಿರಿಯ ಟೆನ್ನಿಸ್​ ಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಸ್ಟೆಫನೋಸ್​ ಸಿಟ್ಸಿಪಾಸ್ ಎಟಿಪಿ ಫೈನಲ್​ ಪಂದ್ಯದಲ್ಲಿ ಆಸ್ಟ್ರೀಯಾದ ಡೊಮೆನಿಕ್​ ಥೀಮ್​ರನ್ನು 6-7 (6-8), 6-2, 7-6 (7-4) ರಲ್ಲಿ ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಸೆಮಿಫೈನಲ್​ನಲ್ಲಿ ಲೆಜೆಂಡ್​ ರೋಜರ್​ ಫಡೆರರ್​ರನ್ನು 6-3, 6-4ರ ನೇರ ಸೆಟ್​ಗಳಲ್ಲಿ ಬಗ್ಗುಬಡಿದು ಫೈನಲ್​ ಪ್ರವೇಶಿಸಿದ್ದರು.​

ಸಿಟ್ಸಿಪಾಸ್ ಕೇವಲ 21 ವರ್ಷಕ್ಕೆ ಎಟಿಪಿ ಟ್ರೋಫಿ ಗೆದ್ದ ವಿಶ್ವದ 5ನೇ ಕಿರಿಯ ಆಟಗಾರ ಎನಿಸಿಕೊಂಡರು. ಇವರಿಗೂ ಮೊದಲು ಅಮೆರಿಕಾದ ಜಾನ್ ಮೆಕೆನ್ರೋ(19 ವರ್ಷ 11 ತಿಂಗಳು), ಪೇಟ್​ ಸಾಂಪ್ರಸ್​ ( 20 ವರ್ಷ 3 ತಿಂಗಳು), ಆ್ಯಂಡ್ರೆ ಅಗಸ್ಸಿ(20 ವರ್ಷ 3 ತಿಂಗಳೂ) ಹಾಗೂ ಜರ್ಮನಿಯ ಬೋರಿಸ್​ ಬೆಕರ್​(21 ವರ್ಷ, 13 ದಿನ) ಎಟಿಪಿ ಟ್ರೋಫಿ ಎತ್ತಿ ಹಿಡಿದಿದ್ದರು.

ಅಲ್ಲದೆ ಎಟಿಪಿ ಫೈನಲ್‌ನಲ್ಲಿ ಸತತ ನಾಲ್ಕನೇ ಬಾರಿ ಹೊಸಬರೇ ಚಾಂಪಿಯನ್​ ಆಗಿದ್ದಾರೆ. 2016ರಲ್ಲಿ ಇಂಗ್ಲೆಂಡ್​ನ ಆಂಡಿ ಮುರ್ರೆ, 2017ರಲ್ಲಿ ಬಲ್ಗೇರಿಯಾದ ಗ್ರೆಗರ್ ಡಿಮಿಟ್ರೋವ್ ಮತ್ತು 2019ರಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಚೊಚ್ಚಲ ಚಾಂಪಿಯನ್ ಆಗಿದ್ದರು.

Last Updated : Nov 18, 2019, 7:29 PM IST

For All Latest Updates

ABOUT THE AUTHOR

...view details